ವಿಜಯಪುರ: ರಸ್ತೆ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ನಗರದ (Vijayapura) ಹೊರವಲಯದ ಇಂಡಿ ಬೈಪಾಸ್ (Indi Bypass) ಹತ್ತಿರ ನಡೆದಿದೆ. ಸಾವನ್ನಪ್ಪಿರುವ ಬೈಕ್ ಸವಾರನನ್ನು ಜಿಲ್ಲೆಯ ಗಡಗಿ ಲೇಔಟ್ ನಿವಾಸಿ ಮಾಳು ಗುಂಡಣ್ಣನವರ (38) ಎನ್ನಲಾಗಿದೆ.
ಗುಂಡಣ್ಣನವರ ಖಾಸಗಿ ಶಾಲೆಯೊಂದರಲ್ಲಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈ ವ್ಯಕ್ತಿ ಸೊಲಾಪುರ ಬೈಪಾಸ್ ನಿಂದ ಬರುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದ್ದಲೇ ಸಾವನ್ನಪ್ಪಿದ್ದಾನೆ. ವಿಜಯಪುರ ನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.