ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯ ರೋಚಕ ಘಟಕ್ಕೆ ತಿರುಗಿದೆ. ಭಾರತ ತಂಡಕ್ಕೆ 275 ರನ್ ಗಳ ಗುರಿ ನೀಡಲಾಗಿದೆ. ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 445 ರನ್ ಗಳಿಸಿತ್ತು. ನಂತರ ಬ್ಯಾಟಿಂಗ್ ಮುಂದುವರೆಸಿದ ಭಾರತ ತಂಡ 260 ರನ್ ಗಳಿಸಿತ್ತು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಭಾರತೀಯ ಬೌಲರ್ ಗಳ ದಾಳಿಗೆ ನಲುಗಿತ್ತು. ಆಸ್ಟ್ರೇಲಿಯಾ ತಂಡವು 18 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 89 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿದೆ. ಹೀಗಾಗಿ ಭಾರತ ತಂಡಕ್ಕೆ ಗೆಲ್ಲಲು 275 ರನ್ ಗಳ ಗುರಿ ನೀಡಲಾಗಿದೆ. ಪಂದ್ಯವು 5ನೇ ದಿನದಾಟದ 2ನೇ ಸೆಷನ್ ನಲ್ಲಿದ್ದು, ಟಾರ್ಗೆಟ್ ಬೆನ್ನಟ್ಟುವುದು ಭಾರತಕ್ಕೆ ಕಷ್ಟ ಎನ್ನಲಾಗುತ್ತಿದೆ. ಆದರೂ ಅವಕಾಶ ಮಾತ್ರ ಭಾರತಕ್ಕೆ ಇದ್ದೇ ಇದೆ.
ಭಾರತ ತಂಡವು ಕನಿಷ್ಠ 52 ಓವರ್ಗಳನ್ನು ಎದುರಿಸಲಿದ್ದು, ಈ ಮೂಲಕ 275 ರನ್ ಕಲೆಹಾಕಿ ಗೆಲುವು ಸಾಧಿಸಬಹುದು. 275 ರನ್ಗಳ ಒಳಗೆ ಭಾರತ ತಂಡವನ್ನು ಆಲೌಟ್ ಮಾಡುವ ತಂತ್ರದೊಂದಿಗೆ ಡಿಕ್ಲೇರ್ ಘೋಷಿಸಿರುವ ಆಸ್ಟ್ರೇಲಿಯಾ ಪರ ಮೂವರು ವೇಗಿಗಳು ಮಾತ್ರ ಕಾಣಿಸಿಕೊಳ್ಳಲಿದ್ದಾರೆ.