ವಾಲ್ ಮಾರ್ಟ್ ಸಂಸ್ಥೆಯಿಂದ ಭಾರತೀಯರ ನಂಬಿಕೆಗೆ ಭಂಗ ತಂದಿರುವ ಘಟನೆ ನಡೆದಿದ್ದು, ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಹಿಂದೂ ಧರ್ಮದಲ್ಲಿ ಪ್ರಥಮ ಪೂಜೆಯೊಂದಿಗೆ ಪೂಜಿಸಲಾಗುವ ಗಣೇಶನ ಫೋಟೋ ಬಳಸಿ ವಾಲ್‌ಮಾರ್ಟ್ ಸಂಸ್ಥೆ ವಿವಿಧ ವಿನ್ಯಾಸಗಳ ಒಳ ಉಡುಪು ಹಾಗೂ ಚಪ್ಪಲಿಗಳನ್ನು ತಯಾರಿಸಿ ಆನ್ ಲೈನ್ ನಲ್ಲಿ ಮಾರಾಟಕ್ಕೆ ಇಟ್ಟಿದೆ. ಇದನ್ನು ಕಂಡು ಭಾರತೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಮ್ಮ ನಂಬಿಕೆಯ ದೇವರ ಫೋಟೋಗಳನ್ನು ಈ ರೀತಿ ಕೆಟ್ಟದ್ದಾಗಿ ಬಳಸಿದ್ದಕ್ಕಾಗಿ ವಾಲ್ ಮಾರ್ಟ್ ಸಂಸ್ಥೆಯ ವಿರುದ್ದ ಭಾರತ ಹಾಗೂ ಅಮೆರಿಕದಲ್ಲಿನ ಹಿಂದುಗಳು ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ವಾಲ್‌ಮಾರ್ಟ್ ಆ ಎಲ್ಲಾ ಉಡುಪುಗಳ ಮಾರಾಟವನ್ನು ತನ್ನ ಆನ್ಲೈನ್ ಮಾರುಕಟ್ಟೆಯಿಂದ ತೆಗೆದುಹಾಕಿ ಕ್ಷಮಾಪಣೆ ಕೇಳಿದೆ ಎನ್ನಲಾಗಿದೆ.
ಗಣೇಶನ ಚಿತ್ರವನ್ನು ಹೊಂದಿರುವ ಬರೋಬ್ಬರಿ 74 ರೀತಿಯ ಒಳ ಉಡುಪುಗಳನ್ನು ವಾಲ್ ಮಾರ್ಟ್ ತನ್ನ ಆನ್ಲೈನ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿತ್ತು. ಹಿಂದೂ ಧರ್ಮಕ್ಕೆ ದಕ್ಕೆ ತಂದಿರುವ ವಾಲ್ ಮಾರ್ಟ್ ಸಂಸ್ಥೆಯ ವಿರುದ್ದ ಸಾಕಷ್ಟು ನೆಟ್ಟಿಗರಯ ಬಾಯ್ಕಾಟ್ ವಾಲ್ ಮಾರ್ಟ್ ಎಂಬ ಅಭಿಯಾನ ಆರಂಭಿಸಿದ್ದಾರೆ.