ಕರ್ನಾಟಕದ ಮಾಜಿ ಸಿಎಂ ಎಸ್.ಎಂ. ಕೃಷ್ಣ ಇಂದು ವಿಧಿವಶರಾಗಿದ್ದಾರೆ. ರಾಜ್ಯಕ್ಕೆ ಒಂದು ಅವಧಿಗೆ ಸಿಎಂ ಆಗಿದ್ದ ಅವರು ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.
ರಾಜ್ಯದ ಉನ್ನತಿಗಾಗಿ ಹಲವಾರು ಕೊಡುಗೆ ನೀಡಿದ್ದಾರೆ. ಐಟಿ-ಬಿಟಿ, ಬರ, ಕಾವೇರಿ, ಬೆಂಗಳೂರು ರಸ್ತೆ ಅಭಿವೃದ್ಧಿಯೊಂದಿಗೆ ಸಮಸ್ಯೆಯ ಜೊತೆಗೆ ಅಣ್ಣಾವ್ರ ಅಪಹರಣದಂಥಹ ಕಠಿಣ ಸಮಸ್ಯೆಗಳು ಕೂಡ ಅವರ ಆಡಳಿತದ ವಸ್ತು ವಿಷಯಗಳಾಗಿದ್ದವು.
ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ಡಾ. ರಾಜಕುಮಾರ್ ಅವರ ಅಪಹರಣ ದೊಡ್ಡ ಸವಾಲಿನ ಕೆಲಸವಾಗಿತ್ತು. ಇಡೀ ರಾಜ್ಯವೇ ಅಂದು ಶೋಕದಲ್ಲಿ ಮುಳುಗಿತ್ತು. ಸಾಕಷ್ಟು ಗಲಭೆ, ಗಲಾಟೆ ನಡೆದಿದ್ದವು. ಈ ಸನ್ನಿವೇಶವನ್ನು ಎಸ್.ಎಂ. ಕೃಷ್ಣ ಅವರು ನಿಭಾಯಿಸಿದ್ದು ಮಾತ್ರ ಅದ್ಬುತ.
ವೀರಪ್ಪನ್ ಜೊತೆಗೆ ಹಲವು ರೀತಿಯ ಬೇಡಿಕೆ-ಬಯಕೆಗಳ ಮಾತುಕತೆಯ ನಂತರ 108 ದಿನಗಳ ಬಳಿಕ ರಾಜಕುಮಾರ್ ಅವರನ್ನು ವೀರಪ್ಪನ್ ಕಪಿಮುಷ್ಠಿಯಿಂದ ಹೊರ ತಂದಿದ್ದರು.