ಬಾಲಿವುಡ್, ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್ ಎಂದು ದೇಶದಲ್ಲಿ ಹಲವಾರು ವುಡ್ ಗಳಿದ್ದು, ಸಾಕಷ್ಟು ನಟರು ಹೆಸರು ಮಾಡಿದ್ದಾರೆ. ಲವಾರು ನಟರು ಸೂಪರ್ ಹಿಟ್ ಚಿತ್ರಗಳನ್ನು ನೀಡುತ್ತಲೇ ಇದ್ದಾರೆ. ಸಹಜವಾಗಿ ಅಭಿಮಾನಿಗಳಲ್ಲಿ ಅವರ ಸಂಬಳದ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ಈಗ ದೇಶದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಯಾರು? ಎಂಬುವುದರ ಕುರಿತು ನಾವು ನಿಮಗೆ ಹೇಳುತ್ತಿದ್ದೇವೆ. ಈ ಸ್ಟೋರಿ ಓದಿ…
ನಟ ಅಲ್ಲು ಅರ್ಜುನ್ ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಹೀರೋ ಎನ್ನಲಾಗಿದೆ. ಬಾಲಿವುಡ್ನಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್ ನಂತಹ ಘಟಾನುಘಟಿ ನಾಯಕರಿದ್ದರೂ ಅಲ್ಲು ಅರ್ಜುನ್ ಮಾತ್ರ ಅವರಿಗಿಂತಲೂ ಹೆಚ್ಚು ಸಂಭವಾನೆ ಪಡೆಯುತ್ತಿದ್ದಾರೆ. ಫೋರ್ಬ್ಸ್ ಇಂಡಿಯಾ ವರದಿಯಂತೆ, ಅಲ್ಲು ಅರ್ಜುನ್ ಪ್ರತಿ ಚಿತ್ರಕ್ಕೆ 300 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ತಿಳಿದು ಬಂದಿದೆ.
ಇನ್ನುಳಿದಂತೆ ದಳಪತಿ ವಿಜಯ್ ಅವರು ತಮ್ಮ ಕೊನೆಯ ಚಿತ್ರಕ್ಕಾಗಿ 250 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಶಾರುಖ್ ಖಾನ್ ಪ್ರತಿ ಚಿತ್ರಕ್ಕೆ 150 ಕೋಟಿ ರೂ. ನಿಂದ 250 ಕೋಟಿ ರೂ. ಪಡೆಯುತ್ತಾರೆ. ರಜನಿಕಾಂತ್ ಪ್ರತಿ ಚಿತ್ರಕ್ಕೆ 125 ಕೋಟಿ ರೂ. ನಿಂದ 200 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಪ್ರಭಾಸ್ 100 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ನಂತರದ ಸ್ಥಾನಗಳಲ್ಲಿ ಅಜಿತ್ ಕುಮಾರ್, ಸಲ್ಮಾನ್ ಖಾನ್, ಕಮಲ್ ಹಾಸನ್, ಅಕ್ಷಯ್ ಕುಮಾರ್ ಇದ್ದಾರೆ.