ಭಾರತ ಹಾಗೂ ಆಸ್ಟ್ರೇಲಿಯಾ ಮಧ್ಯೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಅಲ್ಲದೇ, ಈ ಸರಣಿಯಲ್ಲಿ ಇನ್ನೂ ಮೂರು ಜಯ ಸಾಧಿಸಿದರೆ ಸಾಕು ಭಾರತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪಲಿದೆ.
ಈಗಾಗಲೇ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಆಸ್ಟ್ರೇಲಿಯಾ ತಂಡವನ್ನು ಮುಂದಿನ ಮೂರು ಪಂದ್ಯಗಳಲ್ಲಿ ಸೋಲಿಸಿ, ಒಂದು ಮ್ಯಾಚ್ ಡ್ರಾ ಮಾಡಿಕೊಂಡರೆ ಭಾರತ ತಂಡ ನೇರವಾಗಿ ಫೈನಲ್ ತಲುಪಬಹುದು.
ನ್ಯೂಜಿಲೆಂಡ್ ತಂಡವು ಮುಂದಿನ ಮೂರು ಪಂದ್ಯಗಳಲ್ಲಿ ವಿಜಯ ಸಾಧಿಸಿದರೂ, ಮೊದಲ ಅಥವಾ ಎರಡನೇ ಸ್ಥಾನದೊಂದಿಗೆ ಭಾರತ ತಂಡ ಫೈನಲ್ ತಲುಪಬಹುದು. ಭಾರತ ತಂಡವು ಆಸ್ಟ್ರೇಲಿಯಾವನ್ನು 4-0 ಅಂತರದಿಂದ ಸೋಲಿಸಿದರೆ, ವಿಶ್ವ ಟೆಸ್ಟ್ ಚಾಂಪಿಯನ್ಶಪ್ ಅಂಕ ಪಟ್ಟಿಯಲ್ಲಿ ಭಾರತಕ್ಕೆ ಶೇ. 65.79 ಅಕ ಸಿಗಲಿದೆ. ಇನ್ನೊಂದೆಡೆ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ನ್ಯೂಜಿಲೆಂಡ್ ತಂಡ 3-0 ಅಂತರದಿಂದ ಗೆದ್ದರೆ ಶೇ. 64.29 ಅಂಕ ಗಳಿಸಲಿದೆ. ದಕ್ಷಿಣ ಆಫ್ರಿಕಾ ತಂಡವು ಪಾಕಿಸ್ತಾನ್ ಹಾಗೂ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಎಲ್ಲ ಪಂದ್ಯಗಳನ್ನು ಗೆದ್ದರೆ ಶೇ. 69.44 ಅಂಕ ಪಡೆಯಲಿದೆ.
ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು 2-3 ಅಂತರದಿಂದ ಸೋತರೆ, ಉಳಿದ ತಂಡಗಳ ಸರಣಿಯ ಫಲಿತಾಂಶಗಳು ಭಾರತಕ್ಕೆ ನಿರ್ಣಾಯಕವಾಗಲಿದೆ. ಇನ್ನೊಂದೆಡೆ ನ್ಯೂಜಿಲೆಂಡ್ -ಇಂಗ್ಲೆಂಡ್ ನಡುವೆ ಸರಣಿಯು 1-1 ಅಂತರದಲ್ಲಿ ಅಂತ್ಯಗೊಳ್ಳಬೇಕು. ಸೌತ್ ಆಫ್ರಿಕಾ-ಶ್ರೀಲಂಕಾ/ಪಾಕಿಸ್ತಾನ್ ನಡುವಣ ಸರಣಿಯು 1-1 ಅಂತರದಲ್ಲಿ ಕೊನೆಗೊಳ್ಳಬೇಕು. ಆಸ್ಟ್ರೇಲಿಯಾ-ಶ್ರೀಲಂಕಾ ನಡುವಣ ಸರಣಿಯು 0-0 ಅಂತರದಿಂದ ಡ್ರಾಗೊಳ್ಳಬೇಕು. ಹೀಗಾದರೆ ಮಾತ್ರ ಆಸ್ಟ್ರೇಲಿಯಾ ತಂಡವು 58.77 ಶೇಕಡಾವಾರು ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಲಿದೆ. ಭಾರತ ತಂಡ ಶೇ. 53.51 ಅಂಕಗಳೊಂದಿಗೆ ದ್ವಿತೀಯ ಸ್ಥಾನದೊಂದಿಗೆ ಫೈನಲ್ ತಲುಪಬಹುದು. ಭಾರತ ಆಸ್ಟ್ರೇಲಿಯಾ ವಿರುದ್ದ ಎಲ್ಲ ಪಂದ್ಯಗಳನ್ನು ಗೆದ್ದು ಫೈನಲ್ ತಲುಪಲಿ ಎಂಬುವುದೇ ಅಭಿಮಾನಿಗಳ ಆಶಯ.