ಮುಂಬಯಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಮಹಾಯುತಿ (Mahayuti) ಮೈತ್ರಿ ಭರ್ಜರಿಯಾಗಿ ಜಯ ಗಳಿಸಿದೆ. ಹೀಗಾಗಿ ಸಂಪುಟ ರಚನೆಗೆ ಕಸರತ್ತು ನಡೆಯುತ್ತಿದೆ. ಆದರೆ, ಸಿಎಂ ಅಭ್ಯರ್ಥಿ ಯಾರು ಎಂಬ ಕುರಿತು ಸ್ಪಷ್ಟತೆ ಸಿಕ್ಕಿಲ್ಲ.
ಒಮ್ಮತಾಭಿಪ್ರಾಯಕ್ಕೆ ಬರಲು ಬಿಜೆಪಿ-ಶಿಂಧೆ ಸೇನೆ-ಅಜಿತ್ ಪವಾರ್ ಎನ್‌ಸಿಪಿ ಕಸರತ್ತು ನಡೆಸಿವೆ. ಮಹಾಯುತಿ ಮೈತ್ರಿಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಸಹಜವಾಗಿ ಬಿಜೆಪಿಗೆ ಸಿಎಂ ಸ್ಥಾನ ಹೋಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.. ಆರ್ ಎಸ್ ಎಸ್ ಸಹ ಫಡ್ನವೀಸ್ ಅವರನ್ನು ಸಿಎಂ ಮಾಡುವಂತೆ ಶಿಫಾರಸ್ಸು ಮಾಡಿದೆ. ಹಾಲಿ ಸಿಎಂ ಏಕನಾಥ್ ಶಿಂಧೆ (Eknath Shinde) ನೇತೃತ್ವದ ಶಿವಸೇನೆ (Shiv Sena) ಹಾಗೂ ಅಜಿತ್ ಪವಾರ್ ಇದಕ್ಕೆ ಒಪ್ಪುತ್ತಿಲ್ಲ ಎನ್ನಲಾಗುತ್ತಿದೆ.
ಲಾಡ್ಲಿ ಬೆಹನ್ ಯೋಜನೆ (Ladli Behna Yojana) ತಂದಿದ್ದು ಶಿಂಧೆ, ಸರ್ಕಾರದ ಯೋಜನೆಗಳು ಈ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿವೆ. ಹೀಗಾಗಿ ಮೈತ್ರಿ ಧರ್ಮದ ಅನುಸಾರ ಶಿಂಧೆ ಮತ್ತೊಮ್ಮೆ ಸಿಎಂ ಆಗಲಿ ಎಂದು ಅವರ ಬಣ ಪಟ್ಟು ಹಿಡಿದಿದೆ.
ಅಜಿತ್ ಪವಾರ್ (Ajit Pawar) ನೇತೃತ್ವದ ಎನ್‌ಸಿಪಿ ಫಡ್ನವೀಸ್ ಸಿಎಂ ಆಗುವುದರ ಪರ ಇದೆ ನ್ನಲಾಗುತ್ತಿದೆ. ಹೀಗಾಗಿ ಸಿಎಂ ಹಗ್ಗ – ಜಗ್ಗಾಟ ಈಗ ದೆಹಲಿಗೆ ಶಿಫ್ಟ್ ಆಗಿದೆ ಎನ್ನಲಾಗುತ್ತಿದೆ.