ಬೀದರ್: ವಕ್ಫ್ ನೋಟಿಸ್ ನೀಡಿದ್ದ ಬಗ್ಗೆ ರಾಜ್ಯದಲ್ಲಿ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಮಧ್ಯೆ ಹೋರಾಟಕ್ಕೆ ಬಿಜೆಪಿ ಮುಂದಾಗಿದೆ. ಅದಕ್ಕಾಗಿ ರಾಜ್ಯಾಧ್ಯಕ್ಷರು ತಂಡ ಸಿದ್ಧಪಡಿಸಿದ್ದಾರೆ. ಆದರೆ, ಬಿಜೆಪಿಯಲ್ಲಿನ ಅತೃಪ್ತರು ಕೂಡ ಬೇರೆ ತಂಡ ಕಟ್ಟಿಕೊಂಡು ರಸ್ತೆಗೆ ಇಳಿದ್ದಾರೆ.
ಈಗಾಗಲೇ ರೆಬೆಲ್ ನಾಯಕರ ತಂಡ ಬೀದರ್ ನಿಂದ ಹೊರಾಟ ಆರಂಭಿಸಿದೆ. ಈ ವೇಳೆ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಭಾರತದಲ್ಲಿ ಮತ್ತೊಂದು ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ನೆಹರೂ ಅವರಿಂದ ಹಿಡಿದು ಮನಮೋಹನ್ ಸಿಂಗ್ ವರೆಗೂ ದೇಶದಲ್ಲಿ ವಕ್ಫ್ ಗೆ ಅವಕಾಶ ನೀಡಲಾಗಿದೆ. ಹೀಗಾಗಿ ಅವರು ಹಿಂದೂಗಳ ದೇವಸ್ಥಾನ, ಮಠ, ಮಂದಿರ, ರೈತರ ಆಸ್ತಿಯೆಲ್ಲ ನಮ್ಮದು ಎನ್ನುತ್ತಿದೆ. ಹೀಗಾಗಿ ಹಿಂದೂಗಳು ಜಾಗೃತಿ ಆಗಬೇಕು. ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದು ಹೇಳಿದ್ದಾರೆ.
ಈಗಾಗಲೇ ಲೋಕಸಭೆಯಲ್ಲಿ ವಕ್ಫ್ ತೆಗೆಯುವ ಕಾರ್ಯ ನಡೆಯುತ್ತಿದೆ. ಧಾನಿ ಮೋದಿ ಅವರು ಜಿಲ್ಲಾಧಿಕಾರಿಗೆ ಅಧಿಕಾರ ಕೊಡಲು ತಯಾರಿ ಮಾಡ್ತಾ ಇದ್ದಾರೆ. ವಕ್ಫ್ ಮೂಲಕ ಲ್ಯಾಂಡ್ ಜಿಹಾದ್ ಗೆ ಇಳಿಯಲಾಗಿದೆ. ಹೀಗಾಗಿ ಬೀದರ್ ಜನರು ವಕ್ಫ್ ಬೋರ್ಡ್ ರದ್ದು ಪಡಿಸಲು ವೋಟ್ ಮಾಡಬೇಕು ಎಂದು ಹೇಳಿದ್ದಾರೆ.