ಮೈಸೂರು: ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಡಾ. ಯತೀಂದ್ರ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ನಮ್ಮ ತಂದೆಯ ಪಾತ್ರವಿಲ್ಲ. ನಮ್ಮ ತಂದೆಯ ವರ್ಚಸ್ಸು ಕುಗ್ಗಿಸಲು ಬಿಜೆಪಿಯವರು ಈ ರೀತಿ ಆರೋಪ ಮಾಡುತ್ತಿದ್ದಾರೆ. ನಮ್ಮ ಜಮೀನು ವಶಕ್ಕೆ ಪಡೆದುಕೊಂಡಿದ್ದಕ್ಕೆ 50:50 ಅನುಪಾತದಲ್ಲಿ ನಮಗೆ ಸೈಟ್ ನೀಡಿದ್ದಾರೆ ಅಷ್ಟೇ. ಕೇಂದ್ರ ಸರ್ಕಾರ, ರಾಜ್ಯಪಾಲರನ್ನ ಬಳಸಿಕೊಂಡು ಅಧಿಕಾರದಿಂದ ಕೆಳಗೆ ಇಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಜನ ಬೆಂಬಲ ನಮ್ಮ ತಂದೆಯವರಿಗೆ ಇದೆ. ಹೀಗಾಗಿ ಬಿಜೆಪಿಗೆ ಏನೂ ಮಾಡಿಕೊಳ್ಳಲು ಆಗಲ್ಲ. ಸದ್ಯ ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರುವುದೇ ಇದಕ್ಕೆ ಸಾಕ್ಷಿ.
ನಮ್ಮ ಭೂಮಿಯನ್ನು ಮುಡಾ ತೆಗೆದುಕೊಂಡಾಗ ನಾನು ಮೆಡಿಕಲ್ ಓದುತ್ತಿದ್ದೆ. ಈ ವಿಚಾರ ತಂದೆಯವರು ಕೂಡ ಗೊತ್ತಿರಲಿಲ್ಲ. ಆದರೆ ತಾಯಿ ಅವರಿಗೆ ಈ ವಿಚಾರ ತಿಳಿದಿರಬಹುದು.. ತಾಯಿ ಅವರಿಗೆ ಭೂಮಿ ಸಿಕ್ಕಾಗ ಅದು ಮುಡಾ ವಶಕ್ಕೆ ಪಡೆದಿದ್ದು ಗೊತ್ತಿರಲಿಲ್ಲ. ಆನಂತರ ಜಮೀನು ಕೊಡಿ ಅಂತ ನ್ಯಾಯಯುತವಾಗಿಯೇ ಕೇಳಿದ್ದಾರೆ ಎಂದರು.
ಈಗಾಗಲೇ ನಾವು 14 ಸೈಟ್ ವಾಪಸ್ ನೀಡಿದ್ದೇವೆ. ತಂದೆಯವರನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು. ತಾಯಿ ಅವರಿಗೆ ಇದರಿಂದ ಬೇಸರವಾಗಿದೆ ಎಂದು ನೊಂದು ಹೇಳಿದ್ದಾರೆ. ನಮ್ಮ ತಾಯಿ ಯಾವತ್ತೂ ರಾಜಕಾರಣದಲ್ಲಿ ತಲೆ ಹಾಕಿಲ್ಲ. ಅಂಥವರನ್ನು ಎಳೆ ತಂದಿದ್ದು ಬೇಸರ ತಂದಿದೆ. ನನ್ನ ತಂದೆ 40 ವರ್ಷಗಳಿಂದ ರಾಜಕಾರಣದಲ್ಲಿದ್ದಾರೆ. ಅವರ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಅವರು ಪ್ರಾಮಾಣಿಕರು. ಇದೆಲ್ಲ ಕೇವಲ ದ್ವೇಷ ಹಾಗೂ ಷಡ್ಯಂತ್ರ ಎಂದಿದ್ದಾರೆ.