ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಅಬ್ಬರಿಸುತ್ತಿದ್ದ ಜೋಸ್ ಬಟ್ಲರ್ 7 ವರ್ಷಗಳ ನಂತರ ಗುಜರಾತ್ ಟೈಟಾನ್ಸ್ ಪಾಲಾಗಿದ್ದಾರೆ.
ರಾಜಸ್ಥಾನ್ ತಂಡದಲ್ಲಿ ಉತ್ತಮ ದಾಖಲೆ ಬರೆದಿದ್ದ ಬಟ್ಲರ್, 15 ಕೋಟಿ, 75 ಲಕ್ಷ ರೂ.ಗೆ ಮಾರಾಟವಾಗಿದ್ದಾರೆ. ಅವರನ್ನು ಖರೀದಿಸಲು ಮೊದಲು ರಾಜಸ್ಥಾನ್ ರಾಯಲ್ಸ್ ಬಿಡ್ ಮಾಡಿತು. ಇದರ ನಂತರ ಗುಜರಾತ್ ಟೈಟಾನ್ಸ್ ಅಖಾಡಕ್ಕಿಳಿಯಿತು. 13 ಕೋಟಿ, 50 ಲಕ್ಷಕ್ಕೆ ಬಟ್ಲರ್ ಅವರನ್ನು ಖರೀದಿಸಲು ಬೇರೆ ಯಾವುದೇ ತಂಡ ಆಸಕ್ತಿ ತೋರಲಿಲ್ಲ.
ನಂತರ ಲಕ್ನೋ ಸೂಪರ್‌ಜೈಂಟ್ಸ್ ಮುಂದೆ ಬಂದಿತು. ಆ ನಂತರ ಲಕ್ನೋ ಮತ್ತು ಗುಜರಾತ್ ನಡುವಿನ ಈ ಹೋರಾಟ 15 ಕೋಟಿ 75 ಲಕ್ಷಕ್ಕೆ ಏರಿತು. ಅಂತಿಮವಾಗಿ ಗುಜರಾತ್ ಟೈಟಾನ್ಸ್ ಬುಟ್ಟಿಗೆ ಹಾಕಿಕೊಂಡಿತು.
10 ಕೋಟಿ ರೂ. ವೇತನಕ್ಕೆ ಬಟ್ಲರ್ ಹಿಂದೆ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದರು. ಅವರ 40 ರ ಸರಾಸರಿಯಲ್ಲಿ 359 ರನ್ ಗಳಿಸಿದ್ದಾರೆ.