ಮೈಸೂರು: ಕುಮಾರಸ್ವಾಮಿ ವಿರುದ್ಧ ಜಿ.ಟಿ. ದೇವೇಗೌಡ ಅವರು ಮತ್ತೆ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ಡೆಮಾಲಿಷ್ ಮಾಡುತ್ತಿದ್ದಾರೆ. ಬಿಜೆಪಿ ಜೊತೆ ಉಳಿಯದಿದ್ದರೆ ಜೆಡಿಎಸ್ ಏನಾಗುತ್ತಿತ್ತೋ ಏನೋ ಎಂದು ವ್ಯಂಗ್ಯವಾಡಿದ್ದಾರೆ.
ದೇವೇಗೌಡರು ಕಟ್ಟಿದ ಪಕ್ಷ, ದೇವರ ದಯೆಯಿಂದ ಸ್ವಲ್ಪ ಉಳಿದಿದೆ. ಆದರೆ, ಕುಮಾರಸ್ವಾಮಿ ಅದನ್ನು ಹಾಳು ಮಾಡಲು ಹೊರಟಿದ್ದಾರೆ. ನನ್ನ ಮೇಲೆ ಅವರಿಗೆಲ್ಲ ಮುನಿಸಿದೆ. ನಾನು ಇನ್ನೂ ಮೂರು ವರ್ಷ ಶಾಸಕನಾಗಿ ಇರುತ್ತೇನೆ. ನಮ್ಮ ಜನ ಎಷ್ಟು ಕಷ್ಟ ಆದರೂ ಇರು ಅಂದಿದ್ದಾರೆ. ಅದಕ್ಕಾಗಿ ಇರುತ್ತೇನೆ. ಮುಂದೆ ಎಲ್ಲವನ್ನೂ ಕ್ಷೇತ್ರದ ಮತದಾರರು ತೀರ್ಮಾನಿಸುತ್ತಾರೆ ಎಂದಿದ್ದಾರೆ.
ಇತ್ತೀಚೆಗಷ್ಟೇ ಜಿ.ಟಿ. ದೇವೇಗೌಡ ಅವರು, ಮುಡಾ ವಿಷಯಕ್ಕೆ ಸಂಬಂಧ ಪಟ್ಟಂತೆ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದರು. ಆಗಿನಿಂದಲೂ ಜೆಡಿಎಸ್ ನಾಯಕರು ಜಿಟಿಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.