ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳಿಗೆ ಎನ್ ಸಿಸಿ ಸೇರುವಂತೆ ಕರೆ ನೀಡಿದ್ದಾರೆ.
116ನೇ ಮನ್ಕಿ ಬಾತ್ ನಲ್ಲಿ ಮಾತನಾಡಿದ ಅವರು, ಪುಸ್ತಕಗಳು ಮನುಷ್ಯನ ಆತ್ಮೀಯ ಸ್ನೇಹಿತ. ಈ ಸ್ನೇಹವನ್ನು ಬಲಪಡಿಸಲು ಗ್ರಂಥಾಲಯಕ್ಕಿಂತ ಉತ್ತಮವಾದ ಸ್ಥಳ ಯಾವುದಿಲ್ಲ. ಹೀಗಾಗಿ ಮಕ್ಕಳು ಪುಸ್ತಕಗಳನ್ನು ಹೆಚ್ಚು ಪ್ರೀತಿಸಬೇಕು. ಚೆನ್ನೈನಲ್ಲಿ ಮಕ್ಕಳಿಗಾಗಿ ಸೃಜನಶೀಲ ಗ್ರಂಥಾಲಯ ಸೃಷ್ಟಿಸಲಾಗಿದೆ ಎಂದಿದ್ದಾರೆ. ಇಂದು ಎನ್ ಸಿಸಿ ದಿನ. ಎನ್ ಸಿಸಿಯು ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ, ಸೇವಾ ಮನೋಭಾವ ತುಂಬುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಶಾಲಾ ದಿನಗಳಲ್ಲಿ ಎನ್ ಸಿಸಿ ಸೇರಬೇಕು ಎಂದು ಕರೆ ನೀಡಿದ್ದಾರೆ.
2014 ರಲ್ಲಿ ಸುಮಾರು 14 ಲಕ್ಷ ವಿದ್ಯಾರ್ಥಿಗಳು ಎನ್‌ಸಿಸಿಗೆ ಸೇರಿದ್ದಾರೆ. ಈಗ 2024 ರಲ್ಲಿ ಎರಡು ಲಕ್ಷಕ್ಕೂ ಅಧಿಕ ಮಕ್ಕಳು ಎನ್ ಸಿಸಿ ಸೇರಿದ್ದಾರೆ. ಇದರಿಂದ ಸೇವಾ ಮನೋಭಾವ, ಸಮಾಜದಲ್ಲಿ ಆದ ಸಂಕಷ್ಟಕ್ಕೆ ಸ್ಪಂದಿಸುವ ಗುಣಗಳು ಬೆಳೆಯುತ್ತವೆ ಎಂದಿದ್ದಾರೆ.
ಅಲ್ಲದೇ, ರಾಜಕೀಯ ಹಿನ್ನಲೆ ಇಲ್ಲದ ಕುಟುಂಬದ ಯುವಕರು ರಾಜಕೀಯ ಸೇರಬೇಕು. ಯಾವ ಕುಟುಂಬಕ್ಕೆ ರಾಜಕೀಯ ಹಿನ್ನೆಲೆ ಇಲ್ಲವೋ ಅಂತಹ ಯುವಕರು ರಾಜಕೀಯ ಸೇರಬೇಕು ಎಂದಿದ್ದಾರೆ.
ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಭಾರತೀಯರು ಇದ್ದಾರೆ. ಗಯಾನಾದಲ್ಲಿ ಪುಟ್ಟ ಭಾರತ ನೆಲೆಸಿದೆ. 180 ವರ್ಷಗಳ ಹಿಂದೆ, ಭಾರತದಿಂದ ಜನರನ್ನು ದುಡಿಮೆಗಾಗಿ ಗಯಾನಾಕ್ಕೆ ಹೋಗಿದ್ದರು. ಈಗ ಅಲ್ಲಿ ಭಾರತೀಯ ಮೂಲದವರೇ ದೇಶ ಮುನ್ನಡೆಸುತ್ತಿದ್ದಾರೆ. ಗಯಾನಾದಂತೆ, ಭಾರತೀಯ ಮೂಲದ ಲಕ್ಷಾಂತರ ಜನರು ಪ್ರಪಂಚದ ಹತ್ತಾರು ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇತರ ದೇಶಗಳಲ್ಲಿ ಭಾರತೀಯ ಮೂಲದ ಜನರು ತಮ್ಮ ಪರಂಪರೆಯನ್ನು ಜೀವಂತವಾಗಿರಿಸುವ ಕಥೆಗಳನ್ನು ನೀವು ಕಂಡುಕೊಳ್ಳಬಹುದೇ? ಅಂತಹ ಕತೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ ಎಂದಿದ್ದಾರೆ. ಅಲ್ಲದೇ, ಇನ್ನೂ ಹಲವಾರು ವಿಷಯಗಳ ಕುರಿತು ಪ್ರಧಾನಿ ಮೋದಿ ಮಾತನಾಡಿದ್ದಾರೆ.