ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಭಾರತೀಯ ಬೌಲರ್ ಪ್ರಾಭಲ್ಯ ಮೆರೆದಿದ್ದಾರೆ.
ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡವು 104 ರನ್ ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಭಾರತ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ (0) ಶೂನ್ಯಕ್ಕೆ ಔಟಾದರೆ, ದೇವದತ್ ಪಡಿಕ್ಕಲ್ (0) ಕೂಡ ಸೊನ್ನೆ ಸುತ್ತಿದರು. ವಿರಾಟ್ ಕೊಹ್ಲಿ ಕೇವಲ 5 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ನಂತರ ವಿವಾದಾತ್ಮಕ ತೀರ್ಪಿಗೆ ಕೆಎಲ್ ರಾಹುಲ್ (26) ಬಲಿಯಾದರು. ಈ ಹಂತದಲ್ಲಿ ರಿಷಭ್ ಪಂತ್ 37 ರನ್ ಬಾರಿಸಿ ಒಂದಷ್ಟು ಹೊತ್ತು ಆಸರೆಯಾಗಿ ನಿಂತರೆ, ಮತ್ತೊಂದೆಡೆ ಧ್ರುವ್ ಜುರೇಲ್ (11) ಹಾಗೂ ವಾಷಿಂಗ್ಟನ್ ಸುಂದರ್ (4) ಬೇಗನೆ ವಿಕೆಟ್ ಒಪ್ಪಿಸಿದರು. ನಿತೀಶ್ ಕುಮಾರ್ ರೆಡ್ಡಿ 59 ಎಸೆತಗಳಲ್ಲಿ 41 ರನ್ ಗಳಿಸಿ ತಂಡಕ್ಕೆ ಆಸೆರಯಾದರು. ಹೀಗಾಗಿ ಭಾರತ ತಂಡ ಕೇವಲ 150 ರನ್ ಗಳಿತ್ತು. ನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಭಾರತೀಯ ಬೌಲರ್ ಗಳಿಗೆ ಶರಣಾದರು ಪರಿಣಾಮ ಕೇವಲ 104 ರನ್ ಗಳಿಗೆ ಆಲ್ ಔಟ್ ಆಯಿತು.
ಜಸ್ಪ್ರೀತ್ ಬುಮ್ರಾ 5 ವಿಕೆಟ್ಗಳ ಸಾಧನೆ ಮಾಡಿದರು. ಮೊಹಮ್ಮದ್ ಸಿರಾಜ್ 2 ವಿಕೆಟ್, ಯುವ ವೇಗಿ ಹರ್ಷಿತ್ ರಾಣಾ 3 ವಿಕೆಟ್ ಪಡೆದು ಮಿಂಚಿದರು.