ಬೆಂಗಳೂರು: ವ್ಯವಹಾರಿಕ ಸಂಬಂಧವನ್ನೇ ಹನಿಟ್ರ್ಯಾಪ್ ಆಗಿ ಬದಲಾಯಿಸಿ ಮಹಿಳೆಯೊಬ್ಬರಿಗೆ ವಂಚಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ತಬಸುಂ ಬೇಗಂ, ಅಜೀಂ ಉದ್ದೀನ್ , ಅಭಿಷೇಕ್ ಇವರು ನಾಲ್ಕು ವರ್ಷಗಳ ಸ್ನೇಹಿತರು. ಇವರು ವ್ಯವಹಾರಿಕ ಸಂಬಂಧವನ್ನೇ ಹನಿಟ್ರ್ಯಾಪ್ ಆಗಿ ಬಳಸಿ ಬ್ಲಾಕ್ ಮೇಲ್ ಮಾಡಿ ಒರ್ವ ಪ್ರೊಫೆಸರ್ ನಿಂದ ಬರೋಬ್ಬರಿ 2.5 ಕೋಟಿ ರೂ. ವಂಚಿಸಿರುವ ಘಟನೆ ನಡೆದಿದೆ.
42 ವಯಸ್ಸಿನ ಓರ್ವ ಪ್ರೊಫೆಸರ್ ಗೆ ಖಾಸಗಿ ಫೋಟೋಗಳನ್ನು ಹಾಕಿ ಹಣ ಎಗರಿಸಿದ್ದಾರೆ. ಇಷ್ಟಾದರೂ ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಈ ಆರೋಪಿತೆ ಮಹಿಳೆ ತಬಸುಂ ಆರ್ ಟಿ ನಗರದ ಒಂದು ಜಿಮ್ ನಲ್ಲಿ ರೆಸೆಪ್ಶನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಅದೇ ಜಿಮ್ ಗೆ 2021 ರಲ್ಲಿ 42 ವಯಸ್ಸಿನ ಒರ್ವ ಪ್ರೊಫೆಸರ್ ಜಾಯಿನ್ ಆಗಿದ್ದಾರೆ. ಆತ ಜಿಮ್ ಗೆ ಸೇರಿದ ಕೆಲವು ದಿನಗಳಲ್ಲಿ ತಬಸುಂ ಜೊತೆಗೆ ಪರಿಚಯ ಆಗಿ ಸ್ನೇಹ ಸಂಬಂಧ ಬೆಳೆಸಿದ್ದಾರೆ.
ಅದು ಇಬ್ಬರ ಮಧ್ಯೆ ಪ್ರೀತಿಯಾಗಿ ಬದಲಾಗಿದೆ. ಆನಂತರ ಆಕೆ ಗಂಡನ ಬಿಟ್ಟಿದ್ದಾಳೆ ಎನ್ನುವ ವಿಚಾರ ಪ್ರೊಫೆಸರ್ ಗೆ ಗೊತ್ತಾಗಿ ಆತ ಗಲಾಟೆ ಮಾಡಿದ್ದ ಎನ್ನಲಾಗಿದೆ. ಆನಂತರ ವ್ಯವಹಾರ ನಡೆಸಲು ಮತ್ತು ಒಂದಷ್ಟು ಬಿಜಿನೆಸ್ ಮಾಡಬೇಕು ಎಂದು ಹಂತ ಹಂತವಾಗಿ ಸುಮಾರು ಎರಡು ಕೋಟಿ ಇಪತ್ತೈದು ಲಕ್ಷಕ್ಕು ಹೆಚ್ಚಿನ ಹಣ ಪಡೆದಿದ್ದಾಳೆ. ನಂತರ ಇಬ್ಬರ ಮಧ್ಯೆ ಗಲಾಟೆಯಾಗಿದೆ. ಆಗ ಪ್ರೊಫೆಸರ್ ಹಣ ನೀಡಲ್ಲ ಎಂದಿದ್ದಾರೆ. ಆಗ ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ ಹಣ ಎಗರಿಸಿದ್ದಾರೆ. ಸದ್ಯ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.