ಮೈಸೂರು: ಯಡಿಯೂರಪ್ಪ ತಮ್ಮ ಮಗನನ್ನು ಸಿಎಂ ಮಾಡಲು ಹೊರಟಿದ್ದಾರೆ. ಆದರೆ, ವಿಜಯೇಂದ್ರಗೆ ನಮ್ಮ ಬಗ್ಗೆ ಮಾತನಾಡಲು ರೈಟ್ಸ್ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 5 ಕೆಜಿ ಇರುವುದನ್ನು 10 ಕೆಜಿಗೆ ಏರಿಸಿದ್ದು ನಾವು. ನಾವು ಕೊಟ್ಟ 7 ಕೆಜಿ ಅಕ್ಕಿಯನ್ನು, ಯಡಿಯೂರಪ್ಪ 5 ಕೆಜಿಗೆ ಇಳಿಸಿದರು. ಆದರೆ, ನಾವು ಮತ್ತೆ 10 ಕೆಜಿ ಅಕ್ಕಿ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.
ಈ ವೇಳೆ ಮಾಧ್ಯಮಗಳ ವಿರುದ್ಧ ಗುಡುಗಿದ ಅವರು, ಬಿಜೆಪಿ ಮಾತನಾಡಿರುವ ವಿಷಯಗಳನ್ನು ಮಾತ್ರ ತೋರಿಸಬೇಡಿ. ನಾವು ಹೇಳಿರುವುದನ್ನು ಕೂಡ ತೋರಿಸಿ ಎಂದು ಹೇಳಿದ್ದಾರೆ. ಅದಾನಿಗೆ ವಾರೆಂಟ್ ಕೊಟ್ಟಿದ್ದಾರೆ. ವಾರೆಂಟ್ ಕೊಟ್ಟ ಮೇಲೆ ಅವರನ್ನು ಅರೆಸ್ಟ್ ಮಾಡಲೇಬೇಕು, ದೇಶದ ಗೌರವ ಹೋಗಿದೆ. ಇವರಿಗೆ ಸಪೋರ್ಟ್ ಮಾಡುತ್ತಿರುವುದು ಬಿಜೆಪಿ ಎಂದು ಗುಡುಗಿದ್ದಾರೆ.
ಮಹಾರಾಷ್ಟ್ರದಲ್ಲಿ ದೊಡ್ಡ ಫೈಟ್ ಇದೆ. ಯಾರು ಬೇಕಾದರೂ ಅಧಿಕಾರಕ್ಕೆ ಬರಬಹುದು. ನಾನು ಎಲ್ಲಾ ಕಡೆ ಪ್ರಚಾರಕ್ಕೆ ಹೋಗಿಲ್ಲ. ಹಾಗಾಗಿ ಹೆಚ್ಚು ಗೊತ್ತಿಲ್ಲ. ಚನ್ನಪಟ್ಟಣ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ಎಷ್ಟು ಅಂತರದಲ್ಲಿ ಗೆಲ್ಲುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.