ಮೈಸೂರು: ನಬಾರ್ಡ್ ದೇಶದಲ್ಲಿ ರೈತರಿಗೆ ಸಾಲ ನೀಡುವುದನ್ನು ಕಡಿಮೆ ಮಾಡಿದೆ. ಇದರಿಂದಾಗಿ ರೈತರಿಗೆ ತೊಂದರೆಯಾಗುತ್ತಿದೆ. ರಾಜ್ಯದ ರೈತರು ಇದಕ್ಕೆ ಹೊರತಲ್ಲ. ಮಣ್ಣಿನ ಮಗ ಕುಮಾರಸ್ವಾಮಿ ಏನು ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ 5600 ಕೋಟಿ ರೂ ಕೊಟ್ಟಿದ್ದರು. ಶಾರ್ಟ್ ಟರ್ಮ್ ಲೋನ್ 2,343 ಕೋಟಿ ನೀಡಿದ್ದರು. ಈ ಬಾರಿ ಶೇ. 58ರಷ್ಟು ಕಡಿಮೆ ಮಾಡಿದ್ದಾರೆ. ನಾವು ಶೇ. 4.5ರಷ್ಟು ಬಡ್ಡಿ ಕೊಡುತ್ತೇವೆ. ಸಾಲ ಕೊಡದೇ ಹೋದರೆ ಕರ್ಮಷಿಯಲ್ ಬ್ಯಾಂಕ್ ಗೆ ಹೋಗಬೇಕು. ಆ ಬ್ಯಾಂಕ್‌ಗಳು ಶೇ. 12ರಷ್ಟು ಬಡ್ಡಿ ಹಾಕುತ್ತಾರೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ರೈತರ ಮಗ ಮಣ್ಣಿನ ಮಗ ಏನು ಮಾಡುತ್ತಿದ್ದಾರೆ? ನಿರ್ಮಲಾ ಸೀತಾರಾಮನ್ ಗೆ ನಬಾರ್ಡ್ ಅಧಿಕಾರಿಗಳ ಜೊತೆ ಮಾತನಾಡಲು ಹೇಳುತ್ತೇನೆ. ಮಾಧ್ಯಮಗಳು ಜನರಿಗೆ ಸತ್ಯವನ್ನು ತೋರಿಸಿ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಮಗನನ್ನು ಸಿಎಂ ಮಾಡಲು ಹೊರಟಿದ್ದಾರೆ. ಅವನಿಗೆ ನಮ್ಮ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ. ಆತ ಮಾತನಾಡಿದ್ದನ್ನು ಮಾಧ್ಯಮಗಳು ಪ್ರಸಾರ ಮಾಡಲೇಬಾರದು. 5 ರಿಂದ 10 ಕೆಜಿ ಅಕ್ಕಿ ಮಾಡಿದ್ದು ನಾವು.
ಐಟಿ ಕಟ್ಟುವವರಿಗೆ ಅಕ್ಕಿ ಯಾಕೇ ಕೊಡಬೇಕು ಎಂದು ಗುಡುಗಿದ್ದಾರೆ.