ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಗಯಾನ ಪ್ರವಾಸದಲ್ಲಿದ್ದಾರೆ. ಪ್ರಧಾನಿ ಅವರನ್ನು ಗಯಾನ ದೇಶ ಅದ್ದೂರಿಯಾಗಿ ಸ್ವಾಗತಿಸಿತು.
ಪ್ರವಾಸದ ಕೊನೆಯ ದಿನ ಗಯಾನದಲ್ಲಿ ಭಾರತೀಯರರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ವೇಳೆ ಗಯಾನಾದಲ್ಲಿನ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. ಅಲ್ಲಿ ರಾಷ್ಟ್ರಪಿತನಿಗೆ ಗೌರವ ಸಲ್ಲಿಸಿದರು. ಆ ಸಂದರ್ಭದಲ್ಲಿ ರಾಮ ಭಜನೆ ಮಾಡುತ್ತಿದ್ದ ತಂಡದ ಜತೆ ತಾವೂ ಸೇರಿಕೊಂಡರು. ತಾಳ ಹಾಕಿ ಸಂಭ್ರಮಿಸಿದರು.
ಇದಕ್ಕೂ ಮುನ್ನ ಗಯಾನಾದ ಜಾರ್ಜ್‌ಟೌನ್ ನಲ್ಲಿರುವ ಭಾರತೀಯ ಸ್ಮಾರಕಕ್ಕೆ ಭೇಟಿ ನೀಡಿ, ಅಲ್ಲಿ ಸಸಿ ನೆಟ್ಟಿದ್ದಾರೆ. ಬರೋಬ್ಬರಿ 56 ವರ್ಷಗಳಲ್ಲಿ ಗಯಾನಾಗೆ ಭೇಟಿ ನೀಡಿದ ಪ್ರಧಾನಿ ಎಂಬ ದಾಖಲೆಯನ್ನು ಮೋದಿ ಮಾಡಿದ್ದಾರೆ. ಅಲ್ಲಿ ಪ್ರಧಾನಿಗೆ ಅತ್ಯುತನ್ನ ರಾಷ್ಟ್ರೀಯ ಪ್ರಶಸ್ತಿ ನೀಡಲಾಯಿತು.