ಇತ್ತೀಚೆಗೆ ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಗಳು ಹೆಚ್ಚು ಬ್ರೇಕ್ ಆಗುತ್ತಿವೆ. ಎಷ್ಟೇ ಕಠಿಣ ನಿಯಮ ಜಾರಿಗೊಳಿಸಿದರೂ ಸಂಚಾರ ನಿಯಮಗಳ ಉಲ್ಲಂಘನೆ ಮಾತ್ರ ನಿಲ್ಲುತ್ತಿಲ್ಲ. ಹೀಗಾಗಿ ಟ್ರಾಫಿಕ್ ಪೊಲೀಸರು ಕಠಿಣ ನಿಯಮಕ್ಕೆ ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಹಾಗೂ ಡ್ರಿಂಕ್ ಆಂಡ್ ಡ್ರೈವ್ ಮಾಡುವವರ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ.
ಡಿಎಲ್ ಇಲ್ಲದೆ ಇರುವವರು (ಡ್ರೈವಿಂಗ್ ಲೈಸೆನ್ಸ್) ಡ್ರಿಂಕ್ & ಡ್ರೈವ್ ಮಾಡುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಈ ತಪ್ಪುಗಳನ್ನು ಮಾಡಿ ಸಿಕ್ಕಿ ಬೀಳುವವರ ವಿರುದ್ಧ ಎಫ್ ಐಆರ್ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ. ಡ್ರಿಂಕ್ & ಡ್ರೈವ್ ಪ್ರಕರಣಗಳನ್ನು ತಪ್ಪಿಸುವ ಉದ್ದೇಶದಿಂದ ಈ ಕಠಿಣ ನಿಯಮ ಜಾರಿಗೊಳಿಸಲು ಪೊಲೀಸರು ಮುಂದಾಗಿದ್ದಾರೆ.
ಇಲ್ಲಿಯವರೆಗೆ ಡ್ರಿಂಕ್ & ಡ್ರೈವ್ ಪರೀಕ್ಷೆ ಮಾಡಿ ದಂಡವನ್ನು ಮಾತ್ರ ಕಟ್ಟಿಸಿಕೊಂಡು ಬಿಡಲಾಗುತ್ತಿತ್ತು. ಆದರೆ, ಇದೀಗ ಡ್ರಿಂಕ್ & ಡ್ರೈವ್ ತಪಾಸಣೆಯ ವೇಳೆ ಡ್ರೈವಿಂಗ್ ಲೈಸೆನ್ಸ್ ಸಹ ಪರಿಶೀಲನೆ ಮಾಡಲಾಗುತ್ತಿದೆ. ಒಂದೊಮ್ಮೆ ಇದು ಇಲ್ಲದೆ ಇದ್ದರೆ ಎಫ್ಐಆರ್ ದಾಖಲಿಸಿಕೊಂಡು, ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಲಾಗುತ್ತದೆ.