ಬಾಲಿವುಡ್ ಸೇರಿದಂತೆ ದೇಶದ ಚಿತ್ರರಂಗದಲ್ಲಿ ಸಂಗೀತ ಲೋಕದಲ್ಲಿ ಭಾರೀ ಹೆಸರು ಮಾಡಿರುವ ಎ.ಆರ್. ರೆಹಮಾನ್ ಅವರು ಪತ್ನಿಗೆ ವಿಚ್ಛೇದನ ನೀಡಿದ್ದಾರೆ ಎನ್ನಲಾಗಿದೆ.
ಎ.ಆರ್. ರೆಹಮಾನ್ ಹಾಗೂ ಸೈರಾ ಭಾನು ಅವರು 29 ವರ್ಷಗಳ ಕಾಲ ಸಂಸಾರ ನಡೆಸಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಮಧ್ಯೆ ವೈಮನಸ್ಸು ಮೂಡಿತ್ತು. ವಿಚ್ಛೇದನದ ವಿಚಾರವನ್ನು ಸೈರಾ ಭಾನು ತಿಳಿಸಿದ್ದಾರೆ.
1995ರಲ್ಲಿ ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ಅವರು ಮದುವೆಯಾಗಿದ್ದರು. ತಾಯಿ ನೋಡಿದ ಹುಡುಗಿಯನ್ನು ರೆಹಮಾನ್ ಮದುವೆ ಆಗಿದ್ದರು. ರೆಹಮಾನ್ ಮತ್ತು ಸೈರಾ ಬಾನು ಜೋಡಿಗೆ ಮೂವರು ಮಕ್ಕಳು ಇದ್ದಾರೆ. ಮೂರು ದಶಕಗಳ ಕಾಲ ಹೊಂದಾಣಿಕೆಯಿಂದ ಇದ್ದ ಜೋಡಿ ಈಗ ವಿಚ್ಛೇದನ ಪಡೆದಿದೆ. ಸಂಬಂಧದಲ್ಲಿನ ಭಾವನಾತ್ಮಕವಾಗಿ ಸಂಕಟದಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಇಬ್ಬರ ನಡುವೆ ದೊಡ್ಡ ಅಂತರ ಸೃಷ್ಟಿ ಆಗಿದೆ’ ಎಂದು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಸೈರಾ ಬಾನು ಹೇಳಿದ್ದಾರೆ.