ಬೆಂಗಳೂರು: ಚಿರತೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ನೆಲಮಂಗಲ (Nelamangala) ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ. ಕರಿಯಮ್ಮ (55) ಮೃತ ಮಹಿಳೆ. ಕರಿಯಮ್ಮ ಅವರು ಜನಾನುವಾರುಗಳಿಗೆ ಮೇವು ತರಲು ಜಮೀನಿಗೆ ತೆರಳಿದ್ದ ಸಂದರ್ಭದಲ್ಲಿ ಚಿರತೆ ದಾಳಿ ನಡೆಸಿದೆ. ಈ ವೇಳೆ ಚಿರತೆ ರುಂಡ ತಿಂದು ಹಾಕಿದೆ. ಜನರು ಮುಂಡವನ್ನು ಬೆಂಕಿಯ ಸಹಾಯದಿಂದ ಕಾಯುತ್ತಿದ್ದ ವೇಳೆ ಜನರನ್ನು ಹೆದರಿಸಿ ಶವ ಒಯ್ಯಲು ಕೂಡ ಚಿರತೆ ಯತ್ನಿಸಿದೆ.
ಆಗ ಜನರು, ದೊಣ್ಣೆ ಹಾಗೂ ಟಾರ್ಚ್ ಹಿಡಿದು ಅದನ್ನು ಹೆದರಿಸಿ, ಅದರ ಬಾಯಿಂದ ಮಹಿಳೆಯ ಶವ ಕಸಿದುಕೊಂಡಿದ್ದಾರೆ.
ಎಚ್ಚೆತ್ತುಕೊಳ್ಳದ ಅರಣ್ಯ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದಾರೆ.