ಐಪಿಎಲ್ (IPL 2025) ಮೆಗಾ ಹರಾಜಿಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ 574 ಆಟಗಾರರ ಹೆಸರನ್ನು ಹರಾಜಿಗೆ ಅಂತಿಮಗೊಳಿಸಲಾಗಿದೆ. ಈ ಪೈಕಿ 241 ರಾಷ್ಟ್ರೀಯ ತಂಡದ ಪರ ಕಣಕ್ಕಿಳಿದ ಆಟಗಾರರಿದ್ದಾರೆ. ಆದರೆ, ಈ ಬಾರಿ ಐವರು ಐಪಿಎಲ್ ನಿಂದ ದೂರ ಉಳಿದಿದ್ದಾರೆ.
ಇಂಗ್ಲೆಂಡ್ ನ ಬೌಲರ್ ಜೋಫ್ರಾ ಆರ್ಚರ್ ಮುಂಬೈ ತಂಡದಿಂದ ಕಣಕ್ಕೆ ಇಳಿದಿದ್ದರು. ಆದರೆ, ಗಾಯದ ಸಮಸ್ಯೆಯಿಂದಾಗಿ ಈ ಬಾರಿಯ ಐಪಿಎಲ್ ನಿಂದ ದೂರ ಉಳಿದಿದ್ದಾರೆ. ಇಂಗ್ಲೆಂಡ್ ತಂಡದ ಸ್ಪೋಟಕ ಆಟಗಾರ ಜೇಸನ್ ರಾಯ್ ಕಳೆದ ಬಾರಿ ಕೆಕೆಆರ್ ನಲ್ಲಿದ್ದರು. ಆದರೆ, ಆಡಿರಲಿಲ್ಲ. ಈ ಬಾರಿ ಐಪಿಎಲ್ ನಿಂದಲೇ ದೂರು ಉಳಿದಿದ್ದಾರೆ.
ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. 2025ರ ಆ್ಯಶಸ್ ಸರಣಿಯ ಸಿದ್ಧತೆಗಾಗಿ ಅವರು ಐಪಿಎಲ್ ನಿಂದ ದೂರು ಉಳಿದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ದ ಕ್ಯಾಮರೋನ್ ಗ್ರೀನ್ ಕೂಡ ಐಪಿಎಲ್ ಗೆ ಹೆಸರು ನೋಂದಾಯಿಸಿಲ್ಲ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್ ನಿಂದ ಹಿಂದೆ ಸರಿದಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಕ್ರಿಸ್ ವೋಕ್ಸ್ ಕೂಡ ಐಪಿಎಲ್ ನಿಂದ ದೂರ ಉಳಿದ್ದಾರೆ.