ಇತ್ತೀಚೆಗೆ ಯುವ ಪೀಳಿಗೆ ದುಷ್ಚಟಕ್ಕೆ ಬಲಿಯಾಗುತ್ತಿರುವುದು ಕಳವಳ ಸಂಗತಿಯಾಗುತ್ತಿದೆ. ಇಲ್ಲೊಬ್ಬ ಮಗ ಡ್ರಗ್ಸ್ ಚಟಕ್ಕೆ ಬಲಿಯಾಗಿದ್ದಕ್ಕೆ ನೊಂದ ತಾಯಿಯೊಬ್ಬರು ಆತನನ್ನು ಜೈಲಿಗೆ ಹಾಕಿ, ಇಲ್ಲವಾದರೆ ಸಾಯಿಸಲು ಅನುಮತಿ ನೀಡಿ ಎಂದು ಮನವಿ ಮಾಡಿದ್ದಾರೆ.
ಈ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ನಡೆದಿದೆ. ಪಟ್ಟಣದ ರೇಣುಕಮ್ಮ ಎಂಬ ಮಹಿಳೆ ತನ್ನ ಪುತ್ರ ಡ್ರಗ್ಸ್ (Drugs) ಮತ್ತು ಗಾಂಜಾ (Ganja) ಚಟಕ್ಕೆ ಬಲಿಯಾಗಿದ್ದಾನೆ. ದಯವಿಟ್ಟು ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ ಎಂದು ಗೋಳಾಡಿದ್ದಾರೆ.
ಡ್ರಗ್ಸ್ ವ್ಯಸನಿಯಾಗಿರುವ ಆತ, “ಹೆಣ್ಣು ಮಕ್ಕಳನ್ನು ಕೆಣಕಿ ಥಳಿಸಿಕೊಳ್ಳುತ್ತಾನೆ. ಜನರು ಮನೆ ಮುಂದೆ ಬಂದು ಗಲಾಟೆ ಮಾಡುತ್ತಾರೆ. ಗಾಂಜಾ ಸೇವನೆಯಿಂದ ನನ್ನ ಮಗ ಹಾಳಾಗಿದ್ದಾನೆ. ತುರುವೇಕೆರೆ ಪೊಲೀಸರು ಗಾಂಜಾ ಹಾವಳಿ ತಡೆಯಬೇಕು. ಈತನ ಕಾಟಕ್ಕೆ ನಾನು ರೋಸಿ ಹೋಗಿದ್ದೇನೆ. ಹೀಗಾಗಿ ಆತನನ್ನು ವಿಷ ಹಾಕಿ ಕೊಲ್ಲಲು ಅನುಮತಿ ನೀಡಿ ಎಂದು ಕಣ್ಣೀರು ಸುರಿಸಿದ್ದಾರೆ. ತಾಯಿಯ ಗೋಳಾಟ ಕಂಡು ಜನರು ಕೂಡ ಕಣ್ಣೀರು ಸುರಿಸಿದ್ದಾರೆ.