ಬೆಂಗಳೂರು: ವಿಮಾನದಿಂದ ಸಿಲಿಕಾನ್ ಸಿಟಿಗೆ ಬಂದು ಕಾರು ಖದೀಯುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.
ಕಾರು ಹ್ಯಾಕ್ ಮಾಡಿ ಎಗರಿಸುತ್ತಿದ್ದ ಖದೀಮರನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಸುತ್ತಮುತ್ತ ಹೈಎಂಡ್ ಕಾರುಗಳನ್ನೇ ಟಾರ್ಗೆಟ್ ಮಾಡಿದ್ದ ಈ ಹ್ಯಾಕಿಂಗ್ ತಂಡ, ಕಾರಿನ ಡೋರ್ ಗಳನ್ನು ಈಜಿಯಾಗಿ ಸಾಫ್ಟ್ ವೇರ್ ಹ್ಯಾಕ್ ಮಾಡುವದರ ಮೂಲಕ ಕಂಟ್ರೋಲ್ ಗೆ ತೆಗೆದುಕೊಳ್ಳುತ್ತದೆ. ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.
ಕಾರಿನ ಡೋರ್ ಗಳನ್ನು ಈಜಿಯಾಗಿ ಸಾಫ್ಟ್ ವೇರ್ ಹ್ಯಾಕ್ ಮಾಡುವುದರ ಮೂಲಕ ಕಾರನ್ನು ಕಂಟ್ರೋಲ್ ಗೆ ತೆಗೆದುಕೊಳ್ಳುತ್ತಾರೆ. ರಾಜಸ್ಥಾನದಿಂದ ಫ್ಲೈಟ್ ನಲ್ಲೇ ಬಂದು ಆಪರೇಟ್ ಮಾಡುತ್ತಿದ್ದ ಖದೀಮರು, ಬ್ಯಾಡರಹಳ್ಳಿ, ಅನ್ನಪೂರ್ಣೇಶ್ವರಿನಗರ ಸೇರಿದಂತೆ ಹಲವು ಕಡೆ ಕಾರುಗಳನ್ನು ಎಗರಿಸುತ್ತಿದ್ದರು. ಈ ವಿಚಾರ ಕೇಳಿ ಇಡೀ ಬೆಂಗಳೂರು ಬೆಚ್ಚಿ ಬಿದ್ದಿದೆ.