ಬೆಂಗಳೂರು: ಈಗಾಗಲೇ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯಾಗುತ್ತಿರುವ ಮಧ್ಯೆ ಕೇಂದ್ರ ಸರ್ಕಾರವು ಜನರಿಗೆ ಗುಡ್ ನ್ಯೂಸ್ ನೀಡಿದೆ.
ಕೇಂದ್ರ ಸರ್ಕಾರ ಕೇವಲ 34 ರೂ.ಗೆ ಅಕ್ಕಿ ಮಾರಾಟ ಆರಂಭಿಸಿದೆ. ಶುಕ್ರವಾರ ದೀಪಾವಳಿಯ ದಿನದಿಂದ ಆಹಾರ ಧಾನ್ಯಗಳಾದ ಅಕ್ಕಿ, ಬೇಳೆ, ಕಾಳು ವಿತರಿಸಲು ಚಾಲನೆ ನೀಡಲಾಗಿದೆ. ಕೇಂದ್ರ ಸರ್ಕಾರ ಬೆಂಗಳೂರಿನಲ್ಲಿ 34 ರೂ.ಗೆ ಅಕ್ಕಿ ಮಾರಾಟ ಆರಂಭ ಮಾಡಿದೆ. ಅಕ್ಕಿ ಬೆಲೆ 55-60 ರೂ., ಗೋಧಿ ಹಿಟ್ಟು 45-50 ರೂ., ಕಡಲೆಬೇಳೆ 90-100 ರೂ., ಹೆಸರು ಬೇಳೆ 120-130 ರೂ. ಮಾರಾಟವಾಗುತ್ತದೆ.
ಕೇಂದ್ರ ಗ್ರಾಹಕ ವ್ಯವಹಾರ ಮತ್ತು ನಾಗರಿಕ ಪೂರೈಕೆ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದಿಂದ ಬೆಂಗಳೂರಿನಲ್ಲಿ 34 ರೂ. ಅಕ್ಕಿ, 30 ರೂ. ಗೋಧಿ ಹಿಟ್ಟು, ಕಡಲೇ ಬೇಳೆ 70 ರೂ., ಹೆಸರು ಬೇಳೆ 207 ರೂ. ಮಾರಾಟವಾಗುತ್ತಿದೆ. ಜನರು ಈ ಘಟನೆಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.