ಕೇರಳ ಸಿಎಂ ಪಿಣರಾಯಿ ವಿಜಯನ್ (Pinarayi Vijayan) ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು, ಅವರ ಬೆಂಗಾವಲು ಕಾರುಗಳು ಸರಣಿ ಡಿಕ್ಕಿ ಹೊಡೆದಿವೆ. ಈ ಘಟನೆ ತಿರುವನಂತಪುರದಲ್ಲಿ ನಡೆದಿದೆ.
ಸಿಎಂ ಪಿಣರಾಯಿ ದಿನಂತೆ ತಮ್ಮ ಬೆಂಗಾವಲು ವಾಹನಗಳೊಂದಿಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಮುಖ್ಯ ರಸ್ತೆಯಲ್ಲೇ ಮುಂದಿದ್ದ ಕಾರು ತಕ್ಷಣ ಬ್ರೇಕ್ ಹಾಕಿದೆ. ವೇಗವಾಗಿಯೇ ಬೆಂಗಾವಲು ವಾಹನಗಳು ಚಲಿಸುತ್ತಿದ್ದರಿಂದ ನಿಯಂತ್ರಣ ತಪ್ಪಿ, ಒಂದಕ್ಕೊಂದು ಡಿಕ್ಕಿ ಹೊಡೆದಿವೆ ಎನ್ನಲಾಗಿದೆ.
ಸಿಎಂ ಜೊತೆಗೆ ಇದ್ದ ಸುಮಾರು ಏಳು ಬೆಂಗಾವಲು ವಾಹನಗಳು ಸರಣಿಯಾಗಿ ಡಿಕ್ಕಿ ಹೊಡೆದುಕೊಂಡಿರುವೆ. ಮಹಿಳೆಯೊಬ್ಬರು ಈ ಬೆಂಗಾವಲು ವಾಹನಗಳು ಬಂದಾಗಲೇ ರಸ್ತೆಯಲ್ಲಿ ದಿಢೀರನೆ ಬಲಕ್ಕೆ ತಿರುಗಿಸಿದ್ದಾರೆ. ಹೀಗಾಗಿ ಮುಂದೆ ಹೋಗುತ್ತಿದ್ದ ಭದ್ರತಾ ವಾಹನಗಳು ಬ್ರೇಕ್ ಹೊಡೆದಿವೆ ಎನ್ನಲಾಗಿದೆ.
ಸಿಎಂ ವಾಹನ ಸೇರಿದಂತೆ ಕೊನೆಯ ಆಂಬುಲೆನ್ಸ್ ಕೂಡ ಏಳು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ. ಅದೃಷ್ಟವಶಾತ್ ಸಿಎಂ ಪಿಣರಾಯಿ ವಿಜಯನ್ ಅವರು ಕ್ಷೇಮವಾಗಿದ್ದಾರೆ ಎನ್ನಲಾಗಿದೆ. ವಾಹನಗಳು ಡ್ಯಾಮೇಜ್ ಆಗಿವೆ ಎನ್ನಲಾಗಿದೆ.