ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡ ಹೀನಾಯ ಸೋಲು ಕಂಡಿದೆ. ಭಾರತ ತಂಡವು 76 ರನ್ ಗಳಿಂದ ನ್ಯೂಜಿಲೆಂಡ್ ಮಹಿಳಾ ತಂಡದ ವಿರುದ್ಧ ಸೋಲು ಕಂಡಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿ 1-1 ರಿಂದ ಸಮಬಲಗೊಂಡಿದೆ.
ಇದಕ್ಕೂ ಮುನ್ನ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿತ್ತು. ರಡನೇ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಕಿವೀಸ್ ತಂಡ ಸರಣಿಯನ್ನು ಇನ್ನಷ್ಟು ರೋಚಕಗೊಳಿಸಿದೆ. ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಿ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 259 ರನ್ ಗಳಿಸಿತ್ತು. 260 ರನ್ ಗಳ ಗುರಿಗೆ ಬೆನ್ನಟ್ಟಿದ ಭಾರತೀಯ ವನಿತೆಯರು ಫೆವಲಿಯನ್ ಪರೇಡ್ ನಡೆಸಿ 47.1 ಓವರ್ ಗಳಲ್ಲಿ 183 ರನ್ ಗಳಿಗೆ ಆಲೌಟ್ ಆಗಿ, 76 ರನ್ ಗಳಿಂದ ಸೋಲು ಕಂಡಿತು.
ನ್ಯೂಜಿಲೆಂಡ್ ಪರ ಆರಂಭಿಕ ಆಟಗಾರ್ತಿ ಸುಜಿ ಬೇಟ್ಸ್ 70 ಎಸೆತಗಳಲ್ಲಿ 8 ಬೌಂಡರಿಗಳ ಸಹಾಯದಿಂದ 58 ರನ್ ಗಳಿಸಿದರೆ, ನಾಯಕಿ ಸೋಫಿ ಡಿವೈನ್ ಸಹ 86 ಎಸೆತಗಳಲ್ಲಿ 79 ರನ್ ಗಳಿಸಿದರು. ಜಾರ್ಜಿಯಾ ಪ್ಲಿಮ್ಮರ್ 41 ರನ್ ಗಳಿಸಿದರು. ಮ್ಯಾಡಿ ಗ್ರೀನ್ ಕೂಡ 42 ರನ್ ಗಳಿಸಿದರು. ಪರಿಣಾಮ ನ್ಯೂಜಿಲೆಂಡ್ ತಂಡ ಉತ್ತಮ ರನ್ ಗಳಿಸಿತು. ಭಾರತದ ಪರ ರಾಧಾ ಯಾದವ್ 4 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 2 ವಿಕೆಟ್ ಪಡೆದು ಮಿಂಚಿದರು.
ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಘಾತ ಕಾಡಿತು. ಶೆಫಾಲಿ ವರ್ಮಾ 11 ರನ್ ಗಳಿಸಿದರೆ, ಸ್ಮೃತಿ ಮಂಧಾನ ಖಾತೆ ತೆರೆಯದೆ ಫೆವಲಿಯನ್ ಸೇರಿದರು. ಯಾಸ್ತಿಕಾ ಭಾಟಿಯಾ 12 ರನ್, ನಾಯಕಿ ಹರ್ಮನ್‌ಪ್ರೀತ್ ಕೌರ್ 24 ರನ್, ಜೆಮಿಮಾ 17 ರನ್, ತೇಜಲ್ ಮತ್ತು ದೀಪ್ತಿ ತಲಾ 15 ರನ್ ಗಳಿಸಿದರು. ಕೆಯಲ್ಲಿ ಸೈಮಾ ಠಾಕೋರ್ 29 ರನ್ ಗಳಿಸುವುದರ ಮೂಲಕ 9ನೇ ವಿಕೆಟ್‌ಗೆ ರಾಧಾ ಯಾದವ್ ಅವರೊಂದಿಗೆ 70 ರನ್ ಗಳ ಜೊತೆಯಾಟ ನೀಡಿದರು. ರಾಧಾ ಯಾದವ್ 64 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 48 ರನ್ ಗಳಿಸಿ ಔಟಾದರು. ಕೊನೆಗೂ ಭಾರತ ಸೋಲು ಕಂಡಿತು.