ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಪಾಕ್ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸರಣಿ ವಶಕ್ಕೆ ಪಡೆದಿದೆ.
ಮೂರು ಪಂದ್ಯಗಳ ಸರಣಿಯನ್ನು ಪಾಕಿಸ್ತಾನ್ ತಂಡ 2-1 ಅಂತರದಿಂದ ಗೆದ್ದು ಬೀಗಿದೆ. ಶಾನ್ ಮಸೂದ್ ನೇತೃತ್ವದ ಪಾಕ್ ಪಡೆ 8 ವರ್ಷಗಳ ನಂತರ ಆಂಗ್ಲರ ವಿರುದ್ಧ ಸರಣಿ ಗೆದ್ದ ಇತಿಹಾಸ ಬರೆದಿದೆ. ಟಾಸ್ ಗೆದ್ದಿದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಹೀಗಾಗಿ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 267 ರನ್ಗಳಿಸಿ ಆಲೌಟ್ ಆಯಿತು. ನಂತರ ಬ್ಯಾಟಿಂಗ್ ನಡೆಸಿದ ಪಾಕ್, ಸೌದ್ ಶಕೀಲ್ (134) ಭರ್ಜರಿ ಶತಕ ಸಿಡಿಸಿದ ಪರಿಣಾಮ 344 ರನ್ ಗಳಿಸಿತು.
ಹೀಗಾಗಿ ಇಂಗ್ಲೆಂಡ್ ತಂಡವು 77 ರನ್ ಗಳ ಹಿನ್ನಡೆ ಪಡೆದು ಎರಡನೇ ಇನ್ನಿಂಗ್ಸ್ ಆರಂಭಿಸಿತು. ಆದರೆ, ಸ್ಪಿನ್ನರ್ ಗಳಾದ ನೊಮಾನ್ ಅಲಿ ಹಾಗೂ ಸಾಜಿದ್ ಖಾನ್ ದಾಳಿಗೆ ಇಂಗ್ಲೆಂಡ್ ತತ್ತರಿಸಿ ಕೇವಲ 112 ರನ್ ಗಳಿಗೆ ಆಲೌಟ್ ಆಯಿತು. ಪರಿಣಾಮ ಪಾಕ್ ಗೆ ಕೇವಲ 36 ರನ್ ಗಳ ಗುರಿ ಸಿಕ್ಕಿತು. ಕೇವಲ 3.1 ಓವರ್ ಗಳಲ್ಲಿ ಗುರಿ ಮುಟ್ಟಿದ ಪಾಕ್ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಇಂಗ್ಲೆಂಡ್ ಕನಸು ನುಚ್ಚುನೂರಾಗುವಂತಾಗಿದೆ.