ಅಲಹಾಬಾದ್: ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದ ಪ್ರಕರಣದಲ್ಲಿ ಮುಸ್ಲಿಂ ಪರ ಗುಂಪು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
ಈ ವಿವಾದಕ್ಕೆ ಸಂಬಂಧಿಸಿದಂತೆ 15 ಅರ್ಜಿಗಳ ಕುರಿತು ಜನವರಿ 11ರ ಹೈಕೋರ್ಟ್‌ನ ಆದೇಶವನ್ನು ಮರುಪರಿಶೀಲಿಸುವ ಮನವಿಯು ಪ್ರಶ್ನಿಸಲಾಗಿತ್ತು. ಈ ವಿಷಯವಾಗಿ ಕೋರ್ಟ್ ತನ್ನ ತೀರ್ಪು ಕಾಯ್ದಿರಿಸಿತ್ತು. ನ್ಯಾಯಮೂರ್ತಿ ಮಯಾಂಕ್ ಕುಮಾರ್ ಜೈನ್ ಅವರ ಏಕ ಪೀಠವು ತೀರ್ಪು ನೀಡಿತು. ಸೂಕ್ಷ್ಮ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಬಹು ಅರ್ಜಿಗಳನ್ನು ಒಂದಾಗಿ ಸಂಯೋಜಿಸಿದ ಜನವರಿ 11ರ ಆದೇಶದ ಮರುಸ್ಥಾಪನೆಗೆ ಮುಸ್ಲಿಂರ ಗುಂಪು ಪ್ರಯತ್ನಿಸಿತ್ತು.
ಹಿಂದೂ ಮತ್ತು ಮುಸ್ಲಿಂ ಸಮುದಾಯಗಳಿಗೆ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿರುವ ವಿವಾದಿತ ಭೂಮಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳಿಗೆ ಏಕೀಕೃತ ಕಾನೂನು ಪ್ರಕ್ರಿಯೆಗೆ ಅವಕಾಶ ನೀಡುವ ಮೂಲಕ ಜನವರಿಯ ಆದೇಶವು ಯಥಾಸ್ಥಿತಿಯಲ್ಲಿ ಉಳಿಯುತ್ತದೆ ಎಂದು ಕೋರ್ಟ್ ಹೇಳಿದೆ.