ಉದಯೋನ್ಮುಖ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಭಾರತ ತಂಡವು ಬದ್ಧ ವೈರಿ ಪಾಕ್ ನ್ನು ಬಗ್ಗು ಬಡಿದಿದೆ.
ಭಾರತ ತಂಡವು ಪಾಕಿಸ್ತಾನವನ್ನು 7 ರನ್ ಗಳಿಂದ ಸೋಲು ಕಂಡಿದೆ. ಟೂರ್ನಿಯಲ್ಲಿ ಎರಡೂ ತಂಡಗಳಿಗೆ ಇದು ಮೊದಲ ಪಂದ್ಯವಾಗಿತ್ತು. ಹೀಗಾಗಿ ಭಾರತ ತಂಡ ಗೆಲುವಿನ ಮೂಲಕ ತನ್ನ ಅಭಿಯಾನ ಮುಂದುವರೆಸಿದೆ.
ಈ ಪಂದ್ಯ ಆರಂಭದಿಂದಲೂ ರಣರೋಚಕತೆಯಿಂದ ಕೂಡಿತ್ತು. ಕೊನೆಗೂ ಗೆಲುವು ಪಡೆಯಲು ತಿಲಕ್ ವರ್ಮಾ ನಾಯಕತ್ವದ ತಂಡ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ನಿಗದಿತ ಓವರ್ ಗಳಲ್ಲಿ 188 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ 7 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿ ಸೋಲು ಒಪ್ಪಿಕೊಂಡಿತು.
ಭಾರತದ ಪರ ಆರಂಭಿಕ ಜೋಡಿ ಅಭಿಷೇಕ್ ಶರ್ಮಾ ಮತ್ತು ಪ್ರಭಾಸಿಮ್ರಾನ್ ಸಿಂಗ್ ಅಬ್ಬರದ ಆರಂಭ ಒದಗಿಸಿದರು. ವರ್ ಪ್ಲೇನಲ್ಲೇ ಈ ಜೋಡಿ 68 ರನ್ ಗಳಿಸಿ ಮಿಂಚಿತು. 5 ಸಿಕ್ಸರ್ ಮತ್ತು 8 ಬೌಂಡರಿಗಳನ್ನು ಈ ಜೋಡಿ ಗಳಿಸಿತು. ನಂತರ ಸ್ಪಿನ್ನರ್‌ಗಳು ಬಂದ ತಕ್ಷಣ ಭಾರತದ ಇನ್ನಿಂಗ್ಸ್ ಕುಸಿಯಲಾರಂಭಿಸಿತು. 7 ಮತ್ತು 8ನೇ ಓವರ್‌ಗಳಲ್ಲಿ ಆರಂಭಿಕರಿಬ್ಬರೂ ಔಟಾದರೆ, ನೆಹಾಲ್ ವಧೇರಾ ಮತ್ತು ಆಯುಷ್ ಬಡೋನಿ ಯಾವುದೇ ಮಹತ್ವದ ಕೊಡುಗೆ ನೀಡಿದರು.
ತಿಲಕ್ ವರ್ಮಾ ಕೂಡ ನಿಧಾನಗತಿಯ ಆರಂಭವನ್ನು ಹೊಂದಿದ್ದರೂ ನಂತರ ವೇಗವನ್ನು ಹೆಚ್ಚಿಸಲು ಪ್ರಯತ್ನಿಸಿದರು. ಕೊನೆಯ ಓವರ್‌ಗಳಲ್ಲಿ ರಮಣದೀಪ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ 17 ರನ್ ಚಚ್ಚಿದರು. ಕೊನೆಯ ಎಸೆತದಲ್ಲಿ ರಸಿಖ್ ದಾರ್ ಸಿಕ್ಸರ್ ಬಾರಿಸಿ ತಂಡದ ಮೊತ್ತ 183 ರನ್ ಗಳಿಸುವಂತೆ ಮಾಡಿದರು. ಪಾಕ್ ಪರ ಸ್ಪಿನ್ನರ್ ಸುಫ್ಯಾನ್ ಮಕಿಮ್ 2 ಪ್ರಮುಖ ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಪಾಕ್ ಗೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಮೊಹಮ್ಮದ್ ಹ್ಯಾರಿಸ್ ಎರಡನೇ ಎಸೆತದಲ್ಲಿಯೇ ಔಟಾದರು. ಆದಾಗ್ಯೂ, ಯಾಸಿರ್ ಖಾನ್ ಮತ್ತು ಖಾಸಿಮ್ ಅಕ್ರಂ ಸ್ಫೋಟಕ ಜೊತೆಯಾಟವನ್ನಾಡಿ ತಂಡವನ್ನು ಮತ್ತೆ ಗೆಲುವಿನ ಟ್ರ್ಯಾಕ್ಗೆ ತಂದಿದ್ದರು. ಆದರೆ, 9ನೇ ಓವರ್ ಎಸೆದ ನಿಶಾಂತ್ ಸಿಂಧು ಇಬ್ಬರೂ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವ ಮೂಲಕ ಪಾಕ್ ತಂಡದ ಒತ್ತಡ ಹೆಚ್ಚಿಸಿದರು.
17ನೇ ಓವರ್ ನಲ್ಲಿ ಅರಾಫತ್ ಅವರನ್ನು ಔಟ್ ಮಾಡುವ ಮೂಲಕ ರಸಿಖ್ ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. ರಣರೋಚಕ ತಂಡದಲ್ಲಿ ಕೊನೆಗೂ ಭಾರತ ತಂಡ ಜಯ ಗಳಿಸಿತು.