ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ಮಾಜಿ ನಾಯಕರು ಹಾಗೂ ಭ್ರಷ್ಟಾಚಾರ ವಿರೋಧಿ ವೇದಿಕೆಯ ಅಧ್ಯಕ್ಷರಾದ, ಎನ್ ಆರ್ ರಮೇಶ್ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಇಂದು ಭೇಟಿಯಾಗಿ ಮೂರು ಬೃಹತ್ ಹಗರಣಗಳನ್ನು ತನಿಖೆ ಮಾಡಲು Prosecution Permission ನೀಡುವಂತೆ ಸಂಪೂರ್ಣ ದಾಖಲೆಗಳ ಸಹಿತ ಮನವಿ ಪತ್ರ ನೀಡಿದರು.

” RMV 2ನೇ ಹಂತ ಭೂಪಸಂದ್ರ ಗ್ರಾಮದ ಸರ್ವೆ ನಂಬರ್ 20 ಮತ್ತು 21 ರ ಸುಮಾರು 400 ಕೋಟಿ ರೂಪಾಯಿಗಳಿಗೂ ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ BDA ಸ್ವತ್ತನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ (De – notification) ಹಗರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಹೇಂದ್ರ ಸಿಂಗ್ ಜೈನ್, Rtrd. IAS, ಟಿ. ಶಾಂಭಟ್, Rtrd. IAS, ಎನ್. ನರಸಿಂಹಮೂರ್ತಿ, ಶ್ರೀಮತಿ. ಎರ್ಮಲ್ ಕಲ್ಪನಾ, ಶ್ರೀಮತಿ. ಕೆ. ವಿ. ಜಯಲಕ್ಷಮಮ್ಮ, ಶ್ರೀಮತಿ. ಎಸ್. ಎನ್. ವಿಜಯಲಕ್ಷ್ಮಿ, ಕೆ. ವಿ. ಪ್ರಭಾಕರ್ ಮತ್ತು ಕೀರ್ತಿ ರಾಜ್ ಶೆಟ್ಟಿ ಆರೋಪ ಹೊತ್ತಿದ್ದಾರೆ”.
ಇನ್ನು “ಸಿದ್ಧಾರ್ಥ ವಿಹಾರ ಟ್ರಸ್ಟ್” ಹೆಸರಿನಲ್ಲಿ “ಶೈಕ್ಷಣಿಕ ಉದ್ದೇಶ”ಕ್ಕೆಂದು ನಿಯಮಬಾಹಿರವಾಗಿ 250 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ 02 ಬೃಹತ್ CA ನಿವೇಶನಗಳನ್ನು “BDA” ಮತ್ತು “KIADB” ಯಿಂದ ಹಂಚಿಕೆ ಮಾಡಿಸಿಕೊಂಡಿರುವ ಹಗರಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ M. ಖರ್ಗೆ, ರಾಹುಲ್ M. ಖರ್ಗೆ, ರಾಧಾಬಾಯಿ M. ಖರ್ಗೆ, ರಾಧಾಕೃಷ್ಣ, M. B. ಪಾಟೀಲ್, ಡಾ|| ಎಸ್. ಸೆಲ್ವಕುಮಾರ್ ಹಾಗೂ KIADB ಯ ಅಧಿಕಾರಿಗಳು” ಶಾಮೀಲಾಗಿದ್ದಾರೆಂದು ಆರೋಪಿಸಿದರು.

ಹಾಗೆಯೇ 2015-16 ಮತ್ತು 2016-17 ರ ಸಾಲಿನಲ್ಲಿ ಬಿಬಿಎಂಪಿ ವ್ಯಾಪ್ತಿಯ 439 ಬಸ್ ತಂಗುದಾಣಗಳನ್ನು ತಮ್ಮ ಪಕ್ಷದ ಮತ್ತು ಸರ್ಕಾರದ ಸಾಧನೆಗಳ ಪ್ರಚಾರ ಕಾರ್ಯಗಳಿಗೆ ಬಳಸಿಕೊಂಡು ಒಂದು ನಯಾಪೈಸೆ ಜಾಹೀರಾತು ಶುಲ್ಕ ವನ್ನೂ ಪಾವತಿಸದೆ ಬಿಬಿಎಂಪಿಗೆ 69 ಕೋಟಿ ರೂಪಾಯಿಗಳಷ್ಟು ಜಾಹೀರಾತು ಶುಲ್ಕವನ್ನು ವಂಚಿಸಿರುವ ಬೃಹತ್ ಹಗರಣದಲ್ಲಿ ಖುದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಸಚಿವ ಕೆ. ಜೆ. ಜಾರ್ಜ್ ಹಾಗೂ 2015-16 ಮತ್ತು 2016-17 ರ ಸಾಲಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಾರ್ತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸೇರಿ ಹಗರಣ ಮಾಡಿರುತ್ತಾರೆಂದು” ಆರೋಪಿಸಿದರು.

ಮೇಲೆ ತಿಳಿಸಿರುವ ಮೂರು ಬೃಹತ್ ಹಗರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಮತ್ತು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದೂರುಗಳನ್ನು ಈಗಾಗಲೇ ಸಲ್ಲಿಸಲಾಗಿದ್ದು, ಲೋಕಾಯುಕ್ತ ಪೋಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡು ನಿಷ್ಪಕ್ಷಪಾತವಾದ ತನಿಖೆ ನಡೆಸಲು Prosecution Permission ನೀಡುವಂತೆ ಘನೆತೆವೆತ್ತ ರಾಜ್ಯಪಾಲರಿಗೆ ನೇರವಾಗಿ ಪತ್ರ ನೀಡುವ ಮೂಲಕ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಸ್ಪಂಧಿಸಿದ ರಾಗ್ಯಪಾಲರು, ಮೂರೂ ಹಗರಣಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸುವುದಾಗಿಯೂ ಹಾಗೂ ತಮ್ಮ ಕಾನೂನು ಸಲಹೆಗಾರರ ಜೊತೆ ಈ ಸಂಬಂಧ ಚರ್ಚಿಸುವುದಾಗಿಯೂ ತಿಳಿಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಮುಖಂಡ ಎನ್ ಆರ್ ರಮೇಶ್ ಜೊತೆ ವಕೀಲರಾದ ಮೋಹನ್ ರೆಡ್ಡಿಯವರೂ ಸಹ ಉಪಸ್ಥಿತರಿದ್ದರು.