ರೇಣುಕಾಸ್ವಾಮಿ ಹತ್ಯೆಯ ಆರೋಪದಡಿ ಜೈಲು ಪಾಲಾಗಿರುವ ಡಿ ಗ್ಯಾಂಗ್ ಭವಿಷ್ಯ ಇಂದು ನಿರ್ಧಾರವಾಗಲಿದೆ. ಜಾತಕ ಪಕ್ಷಿಗಳಂತೆ ಕಾಯುತ್ತಿರುವವರ ಪಾಲಿಗೆ ಇಂದು ಮಹತ್ವದ ದಿನ. ಹಲವು ದಿನಗಳ ವಿಚಾರಣೆಯ ನಂತರದಲ್ಲಿ ತೀರ್ಪು ಕಾಯ್ದಿರಿಸಿದ್ದ ಸೆಷನ್ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ.

ಹತ್ಯೆಯ ಆರೋಪಿಗಳಾದ ಪವಿತ್ರಗೌಡ, ದರ್ಶನ್ ಸೇರಿದಂತೆ ಆರು ಮಂದಿ ಆರೋಪಿಗಳ ಜಾಮೀನು ಅರ್ಜಿಯ ತೀರ್ಪು ಇಂದು ಹೊರ ಬೀಳಲಿದ್ದು, ಕುತೂಹಲ ಕೆರಳಿಸಿದೆ. ಇದೊಂದು ಗಂಭೀರ ಪ್ರಕರಣವಾದ ಹಿನ್ನೆಲೆಯಲ್ಲಿ ಮೇಲ್ನೋಟಕ್ಕೆ ಆರೋಪಿಗಳಿಗೆ ಕೋರ್ಟ ಜಾಮೀನು ತಿರಸ್ಕರಿಸಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಸಮಾಜದ ದೃಷ್ಟಿಕೋನದಲ್ಲಿ ಕೆಟ್ಟ ಸಂದೇಶ ರವಾನೆಯಾಗದಿರುವ ನಿಟ್ಟಲ್ಲಿ ಪರಿಸ್ಥಿತಿಯ ಗಂಭೀರತೆ ಪರಿಗಣಿಸಿ ತೀರ್ಪು ಹೊರಬೀಳಲಿದೆ ಎಂಬುದು ಸದ್ಯದ ಲೆಕ್ಕಾಚಾರವಾಗಿದೆ.