ತುಮಕೂರು: ಚಿತ್ರನಟಿ, ರಂಗಭೂಮಿ ಕಲಾವಿದೆ ಹೇಮಲತ ಅವರ ಮನೆಯಲ್ಲಿದ್ದ ರಾಜ್ಯ ಪ್ರಶಸ್ತಿ, ಚಿನ್ನದ ಪದಕ ಸೇರಿ 90 ಗ್ರಾಂ ಚಿನ್ನವನ್ನು ದೋಚಿದ್ದ ಮೂವರು ಖದೀಮರನ್ನು ತಿಪಟೂರು ನಗರ ಪೊಲಿಸರು ಬಂಧಿಸಿದ್ದಾರೆ.

ಶಂಕರ್ (26), ಗುರುರಾಜು ( 33), ಮನೋಜ್ ( 18) ಬಂಧಿತ ಆರೊಪಿಗಳು. ತುಮಕೂರು ಜಿಲ್ಲೆ ತಿಪಟೂರು ನಗರದ ವಿಜಯನಗರದಲ್ಲಿ ವಾಸವಿದ್ದ ನಟಿ, ರಂಗಭೂಮಿ ಕಲಾವಿದೆ ಹೇಮಲತ ಅವರಿಗೆ ರಾಜ್ಯ ಸರ್ಕಾರ ಪ್ರಶಸ್ತಿಯಾಗಿ 20 ಗ್ರಾಂ ತೂಕದ ಚಿನ್ನದ ಪದಕ ನೀಡಿ ಗೌರವಿಸಿತ್ತು.

ಚಿನ್ನದ ಪದಕ, ಮಾಂಗಲ್ಯ ಸರ, ಉಂಗುರ ಸೇರಿದಂತೆ 90 ಗ್ರಾಂ ಚಿನ್ನದ ವಡವೆಗಳನ್ನು ವ್ಯಾನಿಟಿ ಬ್ಯಾಗ್ ನಲ್ಲಿಟ್ಟಿದ್ದರು. ಆರೋಪಿಗಳು ಮನೆಗೆ ಪೈಂಟ್ ಮಾಡಲು ಬಂದಿದ್ದ ವೇಳೆ ಚಿನ್ನದ ವಡವೆಗಳು ಕಾಣೆಯಾಗಿತ್ತು. ಅನುಮಾನ ಬಂದು ನಟಿ ಹೇಮಲತ ದೂರು ನೀಡಿದ್ದರು.
ತಿಪಟೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಇನ್ಸ್ಪೆಕ್ಟರ್ ರವಿಕುಮಾರ್ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ನಡೆಸಲಾಗಿತ್ತು. ಆರೋಪಿಗಳನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದ ಬಳಿಕ ಕಳ್ಳತನ ಬೆಳಕಿಗೆ ಬಂಧಿದೆ. ಬಂದಿತರಿಂದ 9 ಲಕ್ಷ ಬೆಲೆ ಬಾಳುವ 90 ಗ್ರಾಂ ಚಿನ್ನದ ವಡವೆಗಳನ್ನು ವಶಕ್ಕೆ ಪಡೆಯಲಾಗಿದೆ. ತಿಪಟೂರು ಪೊಲೀಸರ ಕಾರ್ಯಕ್ಕೆ ಎಸ್ಪಿ ಅಶೋಕ್ ಕೆವಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಾರ್ಗೆ ಹೋಗಿದ್ದ ಯುವಕ ಅನುಮಾನಾಸ್ಪದ ಸಾವು!



















