ಧಾರವಾಡ : ದೇಶದಾದ್ಯಂತ 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆಮಾಡಿದ್ದು, ಧಾರವಾಡದ ಆರ್ ಎನ್ ಶೆಟ್ಟಿ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಧ್ವಜಾರೋಹಣ ನೆರೆವೇರಿಸಿದರು.
ಬಳಿಕ ಪೊಲೀಸರಿಂದ ಸಚಿವರು ಧ್ವಜವಂದನೆ ಸ್ವೀಕರಿಸಿದರು. ತೆರೆದ ವಾಹನದ ಮೂಲಕ ಲಾಡ್ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಗೌರವ ಅರ್ಪಣೆ ಸಲ್ಲಿಸಿದರು. ಮೈದಾನವು ವಿದ್ಯಾರ್ಥಿಗಳ ಕಲರವದಿಂದ ತುಂಬಿತ್ತು.
ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯಾ ಪ್ರಭು, ನಗರ ಕಮಿಷನರ್ ಎನ್ ಶಶಿಕುಮಾರ್, ಜಿಪಂ ಸಿಇಓ ಭುವನೇಶ ಪಾಟೀಲ್ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.