ನವದೆಹಲಿ: ಇಂಡೋನೇಷ್ಯಾ ಮೂಲದ 74 ವರ್ಷದ ವ್ಯಕ್ತಿ ಒರ್ವ 25 ವರ್ಷದ ಯುವತಿಯೊಂದಿಗೆ ಅದ್ದೂರಿಯಾಗಿ ಮದುವೆಯಾಗಿದ್ದಾನೆ. ಬರೊಬ್ಬರಿ 1.5 ಕೋಟಿ ರೂ. ಖರ್ಚು ಮಾಡಿ ಫೋಟೋಗ್ರಾಫರ್‌ಗೆ ಹಣ ನೀಡದೆ ಪರಾರಿಯಾಗಿದ್ದಾನೆ ಎನ್ನುವ ದೂರು ಕೇಳಿ ಬರುತ್ತಿದೆ.
ಇದೀಗ ದಂಪತಿಗಳ ವಿರುದ್ಧ ಛಾಯಾಗ್ರಹಕ ಕಂಪೆನಿಯೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಹೀಗಾಗಿ ಪೊಲೀಸರು ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದು, ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅ.1 ರಂದು ಜಾವಾ ಪ್ರಾಂತ್ಯದ ಪ್ಯಾಸಿಟನ್ ರೀಜೆನ್ಸಿಯಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆದಿದ್ದು, ಅದಕ್ಕಾಗಿ ವರನು ಬರೋಬ್ಬರಿ ಒಂದು ಬಿಲಿಯನ್ ರೂ. ಖರ್ಚು ಮಾಡಿದ್ದಾನೆ. ವಿವಾಹ ಎಂದ ಮೇಲೆ ಮದುವೆ ನೆನಪಿಗಾಗಿ ಫೋಟೊ,ವಿಡಿಯೊ ಇರಲೇಬೇಕು. ಹೀಗಾಗಿ ಫೋಟೊಗ್ರಫಿ ಮತ್ತು ವೀಡಿಯೊಗ್ರಫಿ ಮಾಡಲು ಒಂದು ಕಂಪೆನಿಗೆ ಕಾಂಟ್ರ್ಯಾಕ್ಟ್ ನೀಡಲಾಗಿದೆ. ಅಷ್ಟು ಮಾತ್ರವಲ್ಲದೆ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೂ ಹಣವನ್ನು ನೀಡಲಾಗಿದೆ. ಆದರೆ ಫೋಟೊಗ್ರಾಫ್ ಕಂಪೆನಿಯೂ ಹಣ ನೀಡದೆ ಈತ ಯಾಮಾರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ನಾನಾ ತರನಾಗಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವರನು ಆ ವಧುವಿಗಾಗಿ ಖರ್ಚು ಮಾಡಿ ಮಾಡಿ ಸಾಕಾಗಿರಬೇಕು ಹೀಗಾಗಿ ಕೊನೆಗೆ ಹಣ ಇಲ್ಲದೆ ಮರ್ಯಾದೆಗೆ ಅಂಜಿಕೊಂಡು ವಧುವಿನ ಸ್ಕೂಟರ್ ನಲ್ಲಿಯೇ ಸ್ಥಳದಿಂದ ಪರಾರಿಯಾಗಿರಬಹುದು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಹಾಕಿ ಪ್ರತಿಕ್ರಿಯೆ ನೀಡಿದ್ದಾರೆ.