ಬೆಂಗಳೂರು: ಇಂದಿನಿಂದ ಗ್ರೇಟರ್ ಬೆಂಗಳೂರಿನ ಪಾರ್ಕ್ ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ವಾಕ್ ಮಾಡಲು ಆರಂಭಿಸಿದ್ಧಾರೆ. ಸುತ್ತ ಮುತ್ತಲಿನ ಸ್ಥಳ ಪರಿಶೀಲನೆಗಾಗಿ ಈ ಕಾರ್ಯವನ್ನು ಆರು ದಿನಗಳ ಕಾಲ ಮಾಡಲಿದ್ದಾರೆ.
ಇಂದು ಲಾಲ್ ಬಾಗ್ ನಲ್ಲಿ ಬೆಳಗ್ಗೆ 7 ರಿಂದ 8ರವರೆಗೆ ವಾಕ್ ಮಾಡಿದ್ದು, ಇದಾದನಂತರ ಲಾಲ್ ಬಾಗಿನಲ್ಲಿ ನಾಗರಿಕರೊಂದಿಗೆ ಸಂವಾದ ನಡೆಸಿದ್ದಾರೆ. ಬೆಳಗ್ಗೆ 9 ರಿಂದ 10 ಗಂಟೆ ವರೆಗೆ ಲಾಲ್ ಬಾಗ್‌ನ ಸುತ್ತಮುತ್ತಲಿನ ಸ್ಥಳವನ್ನು ಪರಿಶೀಲನೆ ಮಾಡುದ್ದಾರೆ.

ಆರು ಪಾರ್ಕ್ ಗಳಲ್ಲೂ ಮೂರು ಬಗೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಬೆಂಗಳೂರು ಕೇಂದ್ರ ಪಾಲಿಕೆಯಲ್ಲಿ ಎರಡು ಹಾಗೂ ಉಳಿದ ಪಾಲಿಕೆಗಳಲ್ಲಿ ತಲಾ ಒಂದು ನಡಿಗೆ ಫಿಕ್ಸ್ ಮಾಡಿದ್ದಾರೆ. ಇನ್ನು ಡಿಸಿಎಂ ಆರು ದಿನ ಆರು ಪಾರ್ಕ್ ಗಳಲ್ಲಿ ಒಂದು ತಾಸು ವಾಕ್ ಮತ್ತು ಒಂದು ತಾಸು ಸಂವಾದ ಆಯೋಜಿಸಿದ್ದು, ಮತ್ತೊಂದು ಗಂಟೆ ಸ್ಥಳ ಪರಿಶೀಲನೆ ಸಮಯ ನಿಗದಿ ಪಡಿಸಿದ್ದಾರೆ.
“ಕಾರ್ಯಕ್ರಮದ ವಿವರಗಳ ಪಟ್ಟಿ ಹೀಗಿದೆ?”
• ಅ. 11 – ಬೆಂಗಳೂರು ಕೇಂದ್ರ ಪಾಲಿಕೆ – ಲಾಲ್ ಬಾಗ್ – ಬೆಳಗ್ಗೆ 7 ರಿಂದ 10
• ಅ.12 – ಬೆಂಗಳೂರು ಉತ್ತರ ಪಾಲಿಕೆ – ಮತ್ತಿಕೆರೆ ಜೆ.ಪಿ ಪಾರ್ಕ್
• ಅ.18 – ಬೆಂಗಳೂರು ಪೂರ್ವ ನಗರ ಪಾಲಿಕೆ – ವೆಂಗಯ್ಯ ಇಕೋ ಪಾರ್ಕ್, ಟಿ.ಸಿ ಪಾಳ್ಯ, ಕೆ.ಆರ್ ಪುರಂ
• ಅ. 19 – ಬೆಂಗಳೂರು ದಕ್ಷಿಣ ಪಾಲಿಕೆ – ವೀರಯೋಧರ ವನ, ಕೋರಮಂಗಲ
• ಅ. 25 – ಬೆಂಗಳೂರು ಪಶ್ಚಿಮ ಪಾಲಿಕೆ – ಗಾಂಧೀ ಪಾರ್ಕ್ – ನಾಗರಬಾವಿ 2ನೇ ಹಂತ
• ಅ.26 – ಬೆಂಗಳೂರು ಕೇಂದ್ರ ಪಾಲಿಕೆ – ಕಬ್ಬನ್ ಪಾರ್ಕ್