ಬೆಂಗಳೂರು: ಕೇಂದ್ರ ಸರ್ಕಾರದ ಸಂಬಳ ಪಡೆಯಬೇಕು, ಭಾರತೀಯ ರೈಲ್ವೆಯಂತಹ ಪ್ರಮುಖ ಇಲಾಖೆಗಳಲ್ಲಿ ಕೆಲಸ ಮಾಡಬೇಕು ಎಂಬುದು ತುಂಬ ಜನರ ಕನಸಾಗಿರುತ್ತದೆ. ಈ ಕನಸನ್ನು ನನಸು ಮಾಡಿಕೊಳ್ಳುವ ಸಮಯ ಈಗ ಬಂದಿದೆ. ಹೌದು, ಭಾರತೀಯ ರೈಲ್ವೆ ಇಲಾಖೆಯ ವಾಯವ್ಯ ರೈಲ್ವೆ ವಲಯದಲ್ಲಿ 54 ಹುದ್ದೆಗಳಿಗಾಗಿ ಕ್ರೀಡಾಪಟುಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ.
ರೈಲ್ವೆ ಇಲಾಖೆಯ ವಾಯವ್ಯ ರೈಲ್ವೆ ವಲಯದಲ್ಲಿ 2025-26ನೇ ಸಾಲಿಗಾಗಿ ವಿವಿಧ ವೇತನ ಶ್ರೇಣಿಯ ಹುದ್ದೆಗಳಿಗಾಗಿ ಕ್ರೀಡಾಪಟುಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಒಟ್ಟು 54 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಿದೆ. ಎಸ್ಸೆಸ್ಸೆಲ್ಸಿ ಹಾಗೂ ಐಟಿಐ ಪಾಸಾದ ಯುವಕ ಯುವತಿಯರಿಗೆ ಇದು ಉತ್ತಮ ಅವಕಾಶವಾಗಿದೆ. ಆಗಸ್ಟ್ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಹುದ್ದೆಗಳ ಕುರಿತ ಸಂಕ್ಷಿಪ್ತ ಮಾಹಿತಿ
ನೇಮಕಾತಿ ಸಂಸ್ಥೆ: ವಾಯವ್ಯ ರೈಲ್ವೆ ವಲಯ
ಉದ್ಯೋಗ ಸ್ಥಳ: ಜೈಪುರ, ರಾಜಸ್ಥಾನ
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 10
ಒಟ್ಟು ಹುದ್ದೆಗಳು: 54
ಯಾವ ಕ್ರೀಡಾ ವಿಭಾಗದಲ್ಲಿ ಎಷ್ಟು ಹುದ್ದೆ?
ಬ್ಯಾಡ್ಮಿಂಟನ್ : 02
ಸೈಕ್ಲಿಂಗ್ : 03
ಶೂಟಿಂಗ್ : 02
ಟೇಬಲ್ ಟೆನಿಸ್ : 01
ಆರ್ಚರಿ : 01
ಅಥ್ಲೆಟಿಕ್ಸ್ : 08
ಬ್ಯಾಡ್ಮಿಂಟನ್ : 01
ಬಾಸ್ಕೆಟ್ ಬಾಲ್ : 03
ಬಾಕ್ಸಿಂಗ್ : 03
ಕ್ರಾಸ್ ಕಂಟ್ರಿ : 02
ಗಾಲ್ಫ್ : 01
ಕಬಡ್ಡಿ : 05
ಪವರ್ ಲಿಪ್ಟಿಂಗ್ : 04
ವೇಟ್ ಲಿಫ್ಟಿಂಗ್ : 76
ಕುಸ್ತಿ : 04
ವಾಲಿಬಾಲ್ : 05
ಹಾಕಿ : 04
ಕ್ರಿಕೆಟ್ :04
ಕನಿಷ್ಠ 18ರಿಂದ 25 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಎಸ್ಸಿ, ಎಸ್ಟಿ, ಮಹಿಳೆಯರಿಗೆ 250 ರೂಪಾಯಿ ಅರ್ಜಿ ಶುಲ್ಕವಿದೆ. ಉಳಿದೆಲ್ಲ ಸಮುದಾಯದವರಿಗೆ 500 ರೂಪಾಯಿ ಅರ್ಜಿ ಶುಲ್ಕವಿದೆ. ದಾಖಲೆ ಪರಿಶೀಲನೆ, ಕ್ರೀಡಾ ಸಾಧನೆ, ಶೈಕ್ಷಣಿಕ ಅರ್ಹತೆಯನ್ನು ಪರಿಗಣಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. rrcjaipur.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.