ಬೆಂಗಳೂರು: ಮಾಯಾಂಗನೆಯೋರ್ವಳು ಒಂದು ಕಿಸ್ ಗೆ 50 ಸಾವಿರ, ಒಂದು ರಾತ್ರಿಗೆ 15 ಲಕ್ಷ ರೂ. ರೇಟ್ ಫಿಕ್ಸ್ ಮಾಡಿ ಉದ್ಯಮಿಯನ್ನು ಬಲೆಗೆ ಬೀಳಿಸಿಕೊಂಡು ಈಗ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.
ಶ್ರೀದೇವಿ ರೂಡಗಿ ಬಂಧಿತ ಮಾಯಾಂಗನೆ. ಈ ಸುಂದರಿ ಸ್ಕ್ರಾಪ್ ಟ್ರೇಡಿಂಗ್ ಬ್ಯೂಸಿನೆಸ್ ಮ್ಯಾನ್ ರಾಕೇಶ್ ವೈಷ್ಣವ್ ಎಂಬುವವರಿಗೆ ಹನಿಟ್ರ್ಯಾಪ್ ಮಾಡಲು ಹೋಗಿ ತಾನೇ ಪೊಲೀಸರ ಬಲೆಗೆ ಬಿದ್ದಿದ್ದಾಳೆ ಎನ್ನಲಾಗಿದೆ.
ಶ್ರೀದೇವಿರೂಡಗಿ ಮತ್ತು ಆಕೆಯ ಬಾಯ್ ಫ್ರೆಂಡ್ ಕಮ್ ರೌಡಿಶೀಟರ್ ಗಣೇಶ್ ಕಾಳೆ ಸೇರಿಕೊಂಡು ಉದ್ಯಮಿಯನ್ನು ಟ್ಯಾಪ್ ಮಾಡಲು ಯತ್ನಿಸಿದ್ದಾರೆ. ಮೂರು ಮಕ್ಕಳ ತಂದೆಯಾಗಿರುವ ಉದ್ಯಮಿ ರಾಕೇಶ್, ಮಾಯಾಂಗನೆಯ ಅಂದಕ್ಕೆ ಸೋತು ಹನಿಟ್ರ್ಯಾಪ್ ಗೆ ಒಳಗಾಗಿದ್ದಾನೆ. ಈ ಮಾಯಾಂಗನೆ ಇಸ್ಕಾನ್ ಟೆಂಪಲ್ ಬಳಿಯ ಪ್ರೀಸ್ಕೂಲ್ ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.
ವ್ಯಾಪಾರಿ ರಾಕೇಶ್ ನನ್ನು ಖೆಡ್ಡಾಗೆ ಬೀಳಿಸುವುದಕ್ಕಾಗಿ ಮಕ್ಕಳನ್ನು ಸ್ಕೂಲ್ ಗೆ ಬಿಡಲು ಬಂದಾಗ ಪರಿಚಯ ಮಾಡಿಕೊಂಡು, ನಂತರ ನಂಬರ್ ಚೇಂಚ್ ಮಾಡಿಕೊಂಡು ಚ್ಯಾಟಿಂಗ್, ಡೇಟಿಂಗ್ ಆರಂಭಿಸಿದ್ದಾಳೆ. ನಂತರ ನನ್ನ ಬಳಿ ಕೊಡಲು ಹಣವಿಲ್ಲ. ಒಂದು ದಿನ ನಿನ್ನ ಜೊತೆ ಇರ್ತಿನಿ ಎಂದಿದ್ದಾಳೆ. ರಾಕೇಶ್ ಮನೆಯಲ್ಲಿ ಯಾರೂ ಇಲ್ಲದಾಗ ಬಂದು ಒಂದು ಮುತ್ತು ಕೊಟ್ಟು 50 ಸಾವಿರ ರೂ. ಹಣ ಪೀಕಿದ್ದಾಳೆ. ದಿನಕಳೆದಂತೆ ಹೆಚ್ಚಿನ ಹಣ ಸುಲಿಗೆ ಮಾಡಲು ಪ್ಲ್ಯಾನ್ ಮಾಡಿದ್ದ ಸಾಗರ್ ಮತ್ತು ಈಕೆ, ರಾಕೇಶ್ ಕಿಡ್ಯಾಪ್ ಮಾಡಿ ಒಂದು ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ.
ಹಣ ಕೊಡದಿದ್ರೆ ವಿಡಿಯೋ ಮತ್ತು ಫೋಟೋವನ್ನು ನಿಮ್ಮ ಕುಟುಂಬಸ್ಥರಿಗೆ ನೀಡುತ್ತೇವೆಂದು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಪೊಲೀಸರ ಹೆಸರಿನಲ್ಲೂ ಹೆದರಿಸಿ 20 ಲಕ್ಷ ರೂ.ಗೆ ಡೀಲ್ ಸೆಟ್ ಮಾಡಿದ್ದಾರೆ. ಇದಕ್ಕೆ ಭಯ ಬಿದ್ದ ರಾಕೇಶ್ 1.90 ಲಕ್ಷ ರೂ. ನೀಡಿ, ಉಳಿದ ಹಣ ನೀಡಲು ಸಮಯ ಕೇಳಿದ್ದಾನೆ. ನಂತರ ಹೆದರಿ ಪೊಲೀಸರಿಗೆ ದೂರು ನೀಡಿದ್ದಾನೆ. ಇದೀಗ ಸಿಸಿಬಿ ಪೊಲೀಸರು ಹನಿಟ್ರ್ಯಾಪ್ ಗ್ಯಾಂಗ್ ನ್ನು ಅರೆಸ್ಟ್ ಮಾಡಿದ್ದಾರೆ.