ಬೆಂಗಳೂರು: ಕರ್ನಾಟಕದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆ (ಮುಜರಾಯಿ ಇಲಾಖೆ) ವ್ಯಾಪ್ತಿಯಲ್ಲಿ ಸುಮಾರು 34,566 ಅಧಿಸೂಚಿತ ದೇವಸ್ಥಾನಗಳಿವೆ. ಈ ಪೈಕಿ ಬರೋಬ್ಬರಿ 4170 ದೇವಾಲಯಗಳು ನಾಪತ್ತೆಯಾಗಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
ಅರ್ಚಕರಿಗೆ ತಸ್ಥಿಕ ಹಣ ವಿತರಣೆ ಅಕ್ರಮ ಹಿನ್ನಲೆ ನಡೆದ ಪರಿಶೀಲನೆ ವೇಳೆ ದೇವಾಲಯಗಳು ನಾಪತ್ತೆಯಾಗಿರುವ ಪ್ರಕರಣ ಬಯಲಾಗಿದೆ. ಒಂದೇ ದೇವಸ್ಥಾನಕ್ಕೆ ಹಲವು ಅರ್ಚಕರು, ಹಲವು ದೇವಸ್ಥಾನಗಳಿಗೆ ಒಬ್ಬನೇ ಅರ್ಚಕರಿಂದ ತಸ್ಥಿಕ್ ಹಣ ಪಡೆಯುತ್ತಿರುವುದೂ ತಿಳಿದು ಬಂದಿದೆ.
ತಸ್ಥಿಕ ಹಣ ಅಕ್ರಮ ಹಿನ್ನಲೆ 237 ತಾಲೂಕುಗಳಲ್ಲಿ ಧಾರ್ಮಿಕ ದತ್ತಿ ಇಲಾಖೆ ಪರಿಶೀಲನೆ ನಡೆಸಿದೆ. ಈ ದಾಖಲೆಯಲ್ಲಿರುವ ದೇವಾಲಯ ವಾಸ್ತವದಲ್ಲಿ ಅಸ್ತಿತ್ವದಲ್ಲೇ ಇಲ್ಲ ಎಂದು ತಿಳಿದು ಬಂದಿದೆ.
ಬೆಳಗಾವಿ ಜಿಲ್ಲೆಯಲ್ಲಿ 1788 ದೇವಾಲಯಗಳು, ಗದಗ ಜಿಲ್ಲೆಯಲ್ಲಿ 515, ರಾಯಚೂರು ಜಿಲ್ಲೆಯಲ್ಲಿ 275 ದೇವಾಲಯಗಳು, ಉಡುಪಿಯಲ್ಲಿ 232, ಯಾದಗಿರಿಯಲ್ಲಿ 175 ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ 142 ದೇವಾಲಯಗಳು ನಾಪತ್ತೆಯಾಗಿವೆ.
2020ರಲ್ಲಿ ಶುರುವಾದ ಈ ಸಮೀಕ್ಷೆಯು ದೇವಾಲಯಗಳ ಆಸ್ತಿ ಒತ್ತುವರಿಯನ್ನೂ ಪಟ್ಟಿ ಮಾಡಿದೆ. ಈ ವರ್ಷ ಈ ಸಮೀಕ್ಷೆ ಪೂರ್ಣಗೊಳಿಸಿ ದೇವಾಲಯಗಳ ಆಸ್ತಿ ಒತ್ತುವರಿ ತೆರವು ಆರಂಭಿಸಲಿದೆ ಎಂದು ತಿಳಿದು ಬಂದಿದೆ,
ಇದನ್ನೂ ಓದಿ: ‘ನಿನಗೇನು ಬೇಕು?’ ಎಂದು ಕೇಳಿದ ಸಿಎಂ | ಪೋರನ ಉತ್ತರ ಕೇಳಿ ಯೋಗಿ ಮುಖದಲ್ಲಿ ನಗು! ವಿಡಿಯೋ ವೈರಲ್


















