ಜಾನುವಾರುಗಳ ಹರಾಜಿನಲ್ಲಿ ದಾಖಲೆಯೊಂದು ಸ್ಥಾಪಿತವಾಗಿದೆ. Viatina-19 FIV Mara Imóveis ಎಂಬ ಹೆಸರಿನ ನೆಲೋರ್ ಹಸು ಬ್ರೆಜಿಲ್‌ನಲ್ಲಿ ನಡೆದ ಹರಾಜಿನಲ್ಲಿ 4.8 ಮಿಲಿಯನ್ USD ಅಂದರೆ 40 ಕೋಟಿ ರೂ.ಗೆ ಮಾರಾಟವಾಗಿದೆ.
ಈ ಹಸುವು ಜಾನುವಾರು ಉದ್ಯಮದಲ್ಲಿ ಉತ್ತಮ ದಾಖಲೆಗೆ ಮಾರಾಟವಾಗಿದೆ. ಇದು ಅಸಾಧಾರಣ ಜಾನುವಾರು ತಳಿಶಾಸ್ತ್ರದಲ್ಲಿ ವೃದ್ಧಿಸುತ್ತಿರುವ ಮೌಲ್ಯವನ್ನು ಒತ್ತಿಹೇಳುತ್ತದೆ. ಈ ನೆಲ್ಲೂರು ಹಸು ತಳಿಯು ಚಿತ್ರದಲ್ಲಿರುವಂತೆ ಪ್ರಕಾಶಮಾನವಾದ ಬಿಳಿ ತುಪ್ಪಳವನ್ನು ಹೊಂದಿದೆ. ಭುಜದ ಮೇಲಿರುವ ವಿಶಿಷ್ಟವಾದ ಗೂನು ಆಕೃತಿಗೆ ಹೆಸರುವಾಸಿಯಾಗಿದೆ. ಇದು ಆಂಧ್ರ ಪ್ರದೇಶದಲ್ಲಿ ಜನ್ಮ ಪಡೆದಿದ್ದು ಎಂಬುವುದೇ ಗಮನಾರ್ಹ. ಸದ್ಯ ಇದು ಬ್ರೆಜಿಲ್ ನ ಅತ್ಯಂತ ಪ್ರಮುಖ ತಳಿಗಳಲ್ಲಿ ಒಂದಾಗಿದೆ.
ಈ ನೆಲ್ಲೂರು ಹಸು ಕಳೆದ ವರ್ಷ ಹರಾಜಿನಲ್ಲಿ 35 ಕೋಟಿ ರೂಪಾಯಿ ಮೌಲ್ಯ ಪಡೆದಿತ್ತು. ಆಂಧ್ರ ಮೂಲದ ನೆಲ್ಲೂರು ತಳಿಯನ್ನು ಬ್ರೆಜಿಲ್ ದೇಶದಲ್ಲಿ ಸಂರಕ್ಷಿಸಿ, ತಳಿ ಅಭಿವೃದ್ಧಿ ಮಾಡಿ ಈ ಮೌಲ್ಯಕ್ಕೆ ತರಲಾಗುತ್ತಿದೆ.
ಬ್ರೆಜಿಲ್ ನಲ್ಲಿನ 23 ಕೋಟಿ ಹಸುಗಳಲ್ಲಿ ನೆಲ್ಲೂರು ತಳಿಯ 10 ಕೋಟಿ ಹಸುಗಳಿವೆ ಎಂಬುವುದು ವಿಶೇಷ. ಗುಜರಾತ್ ಮೂಲದ ಗೀರ್ ತಳಿ ಕೂಡ ಬ್ರೆಜಿಲ್ ನಲ್ಲಿ ಮಾಂಸಕ್ಕಾಗಿ ಜನಪ್ರಿಯ.