ಬೆಂಗಳೂರು: ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ 35 ಯುವ ವೃತ್ತಿಪರ ಹುದ್ದೆಗಳು ಖಾಲಿ ಇದ್ದು, ನೇಮಕಾತಿಗಾಗಿ ಅಧಿಸೂಚನೆ (SAI Recruitment 2025) ಹೊರಡಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಮೇ 10 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ದೇಶಾದ್ಯಂತ ಕಾರ್ಯನಿರ್ವಹಿಸಲು ಇಚ್ಛಿಸುವವರು ಅರ್ಜಿ ಸಲ್ಲಿಸುವ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗೆ sportsauthorityofindia.nic.inಗೆ ಸಂಪರ್ಕಿಸಬಹುದಾಗಿದೆ.
ಹುದ್ದೆಗಳ ವಿವರ ಹೀಗಿದೆ
ನೇಮಕಾತಿ ಸಂಸ್ಥೆ: ಭಾರತೀಯ ಕ್ರೀಡಾ ಪ್ರಾಧಿಕಾರ
ಹುದ್ದೆಗಳು- ಯಂಗ್ ಪ್ರೊಫೇಷನಲ್
ಹುದ್ದೆಗಳ ಸಂಖ್ಯೆ- 35
ಸಂಬಳ- 50-70 ಸಾವಿರ ರೂ.
ವಿದ್ಯಾರ್ಹತೆ ಏನು?
ಭಾರತೀಯ ಕ್ರೀಡಾ ಪ್ರಾಧಿಕಾರದ ಅಧಿಸೂಚನೆ ಪ್ರಕಾರ, ದೇಶದ ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಅಭ್ಯರ್ಥಿಗಳು ಡಿಪ್ಲೋಮಾ, ಸಿಎ, ಐಸಿಡಬ್ಲ್ಯೂಎ, ಎಲ್ ಎಲ್ ಬಿ, ಬಿಇ, ಬಿ.ಟೆಕ್, ಎಂಬಿಬಿಎಸ್, ಸ್ನಾತಕೋತ್ತರ ಪದವಿ ಪಡೆದಿರಬೇಕು ಎಂದು ತಿಳಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 32 ವರ್ಷ ಮೀರಿರಬಾರದು. ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ನಿಗದಿಪಡಿಸಲ್ಲ. ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿದ ಬಳಿಕ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
- ಕ್ರೀಡಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ https://sportsauthorityofindia.nic.in/sai_new/ ಗೆ ಭೇಟಿ ನೀಡಬೇಕು
- ಯುವ ವೃತ್ತಿಪರ ಹುದ್ದೆಗಳ ಅಧಿಸೂಚನೆ ಓಪನ್ ಮಾಡಿ, ನಿಯಮಗಳನ್ನು ಪರಿಶೀಲಿಸಿ
- ಅರ್ಜಿ ನಮೂನೆಯನ್ನು ಭರ್ತಿ ಮಾಡಿ
- ಬಳಿಕ ಅರ್ಜಿ ಸಲ್ಲಿಸಿ. ಅರ್ಜಿ ನಮೂನೆಯ ಸಂಖ್ಯೆ/ಕೊರಿಯರ್ ಸ್ವೀಕೃತಿ ಸಂಖ್ಯೆಯನ್ನು ಸುರಕ್ಷಿತವಾಗಿಟ್ಟುಕೊಳ್ಳಿ