ಪಣಜಿ: ಗೋವಾ ಸರ್ಕಾರದ ಗೋವಾ ಶಿಪ್ಯಾರ್ಡ್ ಲಿಮಿಟೆಡ್ (Goa Shipyard Limited) ಕಂಪನಿಯಲ್ಲಿ ಖಾಲಿ ಇರುವ 30 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಅಪ್ರೆಂಟಿಸ್ ಮತ್ತು ಗ್ರಾಜುಯೇಟ್ ಎಂಜಿನಿಯರ್ ಸೇರಿ ಒಟ್ಟು 30 ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಜೂನ್ 25 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಯಾವ ಹುದ್ದೆ ಎಷ್ಟು ಖಾಲಿ?
ಗ್ರಾಜುಯೇಟ್ ಎಂಜಿನಿಯರ್ : 15
ಟೆಕ್ನಿಷಿಯನ್ ಅಪ್ರೆಂಟಿಸ್ : 5
ಗ್ರಾಜುಯೇಟ್ (ಜನರಲ್ ಸ್ಟ್ರೀಮ್) : 10
ಗ್ರಾಜುಯೇಟ್ ಎಂಜಿನಿಯರ್ ಹುದ್ದೆಗೆ ನೇಮಕಾತಿ ಹೊಂದಿದವರಿಗೆ ಮಾಸಿಕ 9 ಸಾವಿರ ರೂ. ಸಂಬಳ ನೀಡಲಾಗುತ್ತದೆ. ಬಿ.ಇ, ಬಿ.ಟೆಕ್ ಅಧ್ಯಯನ ಮಾಡಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗೆ ನೇಮಕಾತಿ ಹೊಂದಿದವರಿಗೆ ಮಾಸಿಕ 8 ಸಾವಿರ ರೂ. ವೇತನ ಸಿಗಲಿದೆ. ಗ್ರಾಜುಯೇಟ್ (ಜನರಲ್ ಸ್ಟ್ರೀಮ್) ಆಗಿ ನೇಮಕಗೊಂಡವರಿಗೆ ಮಾಸಿಕ 9,900 ರೂ. ಸಂಬಳ ಸಿಗುತ್ತದೆ.
ಆಫ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಾಗಿದೆ. ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನೇಮಕಾತಿ ಅಧಿಸೂಚನೆಯಲ್ಲಿ ನೀಡಿರುವ ನಮೂನೆಯ ಪ್ರಕಾರ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಕಳುಹಿಸಬೇಕು. ಅರ್ಜಿಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು goashipyard.in ವೆಬ್ ಸೈಟ್ ಗೆ ಭೇಟಿ ನೀಡಬಹುದು.
ಅರ್ಜಿ ಸಲ್ಲಿಸುವ ವಿಳಾಸ
Head of Department (HR & Admin)
Goa Shipyard Limited,
Vaddem, Vasco-Da-Gama,
Goa – 403802