ಬೆಂಗಳೂರು:ಕರ್ನಾಟಕ ರತ್ನ, ಕನ್ನಡಿಗರ ನೆಚ್ಚಿನ ನಾಯಕ ನಟ, ಕನ್ನಡಿಗರ ಜನಮಾನಸದಲ್ಲಿ ನೆಲೆಯೂರಿರುವ ದಿವಗಂತ ಪುನೀತ್ ರಾಜಕುಮಾರ್ ಅವರ 50ನೇ ಜನ್ಮ ದಿನಾಚರಣೆಯ ಅಂಗವಾಗಿ ಅಂಚೆ ಇಲಾಖೆ ವಿಶೇಷ ಗೌರವ ಸಲ್ಲಿಸಿದೆ.
ಅಪ್ಪು ಇಹಲೋಕ ತ್ಯಜಿಸಿ ಹಲವು ವರ್ಷಗಳು ಕಳೆದಿವೆಯಾದರೂ ಅವರು ಇಂದಿಗೂ ಕನ್ನಡಿಗರ ಮನಸ್ಸಲ್ಲಿ ಅಜರಾಮರವಾಗಿದ್ದಾರೆ. ಕನ್ನಡಾಭಿಮಾನಿಗಳ ಮನಸ್ಸಿನಿಂದ ದೂರ ಹೋಗಿಲ್ಲ. ಈ ಮಧ್ಯೆ ಅಂಚೆ ಇಲಾಖೆ ಕೂಡ ಅವರನ್ನು ನೆನೆಯುವ ಕೆಲಸ ಮಾಡಿದೆ.
ಅಪ್ಪು ಸ್ಮರಣಾರ್ಥವಾಗಿ ಅಂಚೆ ಇಲಾಖೆಯಿಂದ ವಿಶೇಷ ಪಿಚ್ಚರ್ ಪೋಸ್ಟ್ ಕಾರ್ಡ್ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ಕೇಂದ್ರ ಅಂಚೆ ಮಹಾಕಾರ್ಯಾಲಯದಲ್ಲಿ ಪೋಸ್ಟ್ ಕಾರ್ಡ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗಷ್ಟೇ ನಡೆಯಿತು. ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಈ ವೇಳೆ ಕಾರ್ಡ್ ಬಿಡುಗಡೆ ಮಾಡಿದರು. ಅಪ್ಪು ಭಾವಚಿತ್ರ ಹಾಗೂ ಅವರ ಸಿನಿಪಯಣ ಬಿಂಬಿಸುವ ಪೋಸ್ಟ್ ಕಾರ್ಡ್ ಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು