ಬೆಂಗಳೂರು: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ತಳಕು ಹಾಕಿಕೊಂಡಿದೆ. ಹೀಗಾಗಿ ಅವರು ಚಾಲೆಂಜ್ ಮಾಡದೆ ರಾಜೀನಾಮೆ ನೀಡಬೇಕು ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ.
ರಾಜಕಾರಣದಲ್ಲಿ ಆ ರೀತಿ ಟಾರ್ಗೆಟ್ ಮಾಡುವುದು ಅಸಾಧ್ಯ. ನಾವು ಸುಳ್ಳು ಹೋರಾಟಗಳನ್ನು ಮಾಡುತ್ತಿಲ್ಲ. ನಾವು ವಿಷಯಾಧಾರಿತ ಹೋರಾಟ ಮಾಡುತ್ತಿದ್ದೇವೆಯೇ ಹೊರತು ಟಾರ್ಗೆಟ್ ಹೋರಾಟ ಮಾಡುತ್ತಿಲ್ಲ.
ಆತ್ಮಹತ್ಯೆಗೆ ಶರಣಾದ ಸಚಿನ್ ಬರೆದಿರುವ ಡೆತ್ ನೋಟ್ ನಲ್ಲಿ 3 ಅಂಶಗಳಿವೆ. ಸಚಿನ್ ಕುಟುಂಬಸ್ಥರನ್ನು ಭೇಟಿ ಮಾಡಿದಾಗ ಕೆಲವು ವಿಚಾರಗಳನ್ನು ಹೇಳಿದ್ದಾರೆ. ಇಲ್ಲಿ ವೈಯಕ್ತಿಕ ಎಂಬುವುದು ಇಲ್ಲ. ಸಾವನ್ನಪ್ಪಿದ ಜೀವ ಹಾಗೂ ಆ ಕುಟುಂಬಕ್ಕೆ ನ್ಯಾಯ ಸಿಗಬೇಕು. ಪ್ರಿಯಾಂಕ್ ಖರ್ಗೆ ಪಾತ್ರ ಏನು ಎಂಬುವುದು ಡೆತ್ ನೋಟ್ ಹೇಳುತ್ತದೆ.
ರಾಜು ಕಪನೂರು ಪ್ರಿಯಾಂಕ್ ಬಲಗೈ ಬಂಟನಾಗಿದ್ದಾನೆ. ಕಾಂಟ್ರಾಕ್ಟ್ ಕೊಡಿಸುತ್ತೇನೆ ಎಂದು ರಾಜು ಕಪನೂರು ಸಚಿವರ ಬಳಿ ಸಚಿನ್ ಅವರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಡೆತ್ ನೋಟ್ ನಲ್ಲಿ ಇದೆ. ಹೀಗಾಗಿ ಸಚಿವರು ರಾಜೀನಾಮೆ ನೀಡಿ ವಿಚಾರಣೆ ಎದುರಿಸಬೇಕು ಎಂದು ಹೇಳಿದ್ದಾರೆ.