ಬೆಂಗಳೂರು: ವಿಧಾನಸೌಧದಲ್ಲಿ ಗುರುವಾರವಷ್ಟೇ ಶಾಸಕ ಮುನಿರತ್ನ ಹನಿಟ್ರ್ಯಾಪ್ ಬಗ್ಗೆ ಆರೋಪ ಮಾಡಿ, ಹರಿಹಾಯ್ದಿದ್ದರು. ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಈಗ ಅವರ ವಿರುದ್ಧವೇ ಕಾಂಗ್ರೆಸ್ ಮುಖಂಡರು ಹನಿಟ್ರ್ಯಾಪ್ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಲಗ್ಗೆರೆ ನಾರಾಯಣ ಸ್ವಾಮಿ, ವೇಲುನಾಯ್ಕ್ ಸುದ್ದಿಗೋಷ್ಠಿಯಲ್ಲಿ ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಆರೋಪ ಮಾಡಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತ ಮಹಿಳೆಯೊಬ್ಬರು ಕೂಡ ಭಾಗಿಯಾಗಿದ್ದಾರೆ.
ಈ ವೇಳೆ ಮಾತನಾಡಿದ ಸಂತ್ರಸ್ತೆ, ನಾನು ಶಾಸಕ ಮುನ್ನಿರತ್ನ ವಿರುದ್ಧ ಬೆಂಗಳೂರು ಪೊಲೀಸ್ ಅಯುಕ್ತರಿಗೆ ದೂರು ಕೊಟ್ಟಿದ್ದೆ. ದೂರು ಕೊಟ್ಟ ಅರ್ಧ ಗಂಟೆಗೆ ಮುನಿರತ್ನ ಕರೆ ಮಾಡಿ ಧಮ್ಕಿ ಕೊಟ್ಟಿದ್ದರು. ನಿಮ್ಮ ಮಕ್ಕಳನ್ನು ಸಾಯಿಸ್ತೀನಿ ಅಂತಾ ಧಮ್ಕಿ ಹಾಕಿದರು. ಬಿಜೆಪಿ ಪಾರ್ಕ್ ಕಾರ್ಪೊರೇಟರ್ ಪತಿಯನ್ನು ಮುನಿರತ್ನ ಹನಿಟ್ರ್ಯಾಪ್ ಮಾಡಿಸಿದ್ದಾರೆ. ಆ ಬಗ್ಗೆ ಪ್ರಮಾಣ ಮಾಡಲು ದೇವಸ್ಥಾನಕ್ಕೆ ಬರುವಂತೆ ನಾನು ಮೂರು ಬಾರಿ ಹೇಳಿದರೂ ಅವರು ಬಂದಿಲ್ಲ. ಇಲ್ಲಿಯವರೆಗೆ ವಿಪಕ್ಷ ನಾಯಕರ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಶಾಸಕ ಮುನಿರತ್ನ ಹನಿಟ್ರ್ಯಾಪ್ ಗಾಗಿಯೇ ಸ್ಟುಡಿಯೋ ಮಾಡಿಸಿದ್ದಾನೆ.
ಜೆಡಿಎಸ್ ನ ಕಾರ್ಫೋರೆಟರ್ ಅಭ್ಯರ್ಥಿ ಗಂಗಣ್ಣ ಅವರನ್ನೂ ಹನಿಟ್ರ್ಯಾಪ್ ಮಾಡಿದ್ದಾರೆ. ಸುನಂದಮ್ಮ ಎಂಬುವವರ ವಿರುದ್ಧ ಚುನಾವಣೆಗೆ ನಿಲ್ಲಬಾರದು ಅಂತ ಜೆಡಿಎಸ್ ನ ಗಂಗಣ್ಣ ಅವರನ್ನು ಹನಿ ಟ್ರ್ಯಾಪ್ ಮಾಡಿಸಿದ್ದಾರೆ ಅಂತಾ ಸಂತ್ರಸ್ತೆ ಆರೋಪಿಸಿದ್ದಾರೆ. ಅಲ್ಲದೇ ಮತ್ತೊಂದು ಏಡ್ಸ್ ಟ್ರ್ಯಾಪ್ ನ ದಾಖಲೆ ಬಿಡುಗಡೆ ಮಾಡಿದ್ದಾರೆ.
ಜೆಡಿಎಸ್ ಪಕ್ಷದ ಮಾಜಿ ಅಭ್ಯರ್ಥಿ ಗಂಗಣ್ಣ ಮಾತನಾಡಿ, ಮುನ್ನಿರತ್ನ ಕ್ಷೇತ್ರದ ಹಲವು ಪೊಲೀಸ್ ಅಧಿಕಾರಿಗಳನ್ನು ಹನಿ ಟ್ರಾಪ್ಯ್ ಮಾಡಿಸಿದ್ದಾನೆ. ಪೊಲೀಸ್ ಇನ್ಸ್ ಪೆಕ್ಟರ್ ಮುದ್ದುರಾಜ್, ಹಲವು ಬಿಜೆಪಿ ಮಾಜಿ ಮಂತ್ರಿಗಳು, ಶಾಸಕರು, ಅಧಕಾರಿಗಳು ಹನಿಟ್ರ್ಯಾಪ್ ಗಳು ಮುನಿರತ್ನ ಬಳಿ ಇವೆ. ಆದರೆ, ಪೊಲೀಸ್ ವಿಚಾರಣೆ ವೇಳೆ ಫೋನ್ ಕಳಿದಿದೆ ಅಂತಾ ಸುಳ್ಳು ಹೇಳಿದ್ದಾನೆ. ಸರಿಯಾಗಿ ಪೊಲೀಸ್ ತನಿಖೆ ನಡೆದರೆ, ಈ ಎಲ್ಲ ಸತ್ಯಗಳು ಹೊರ ಬೀಳಲಿವೆ ಎಂದಿದ್ದಾರೆ.
ಮಾಜಿ ಕಾರ್ಪೊರೇಟರ್ ವೇಲುನಾಯ್ಕ್ ಮಾತನಾಡಿ, ಕಳೆದ ಎರಡು ದಿನಗಳಿಂದ ಸದನದಲ್ಲಿ ಹನಿ ಟ್ರಾಪ್ಯ್ ಬಗ್ಗೆ ಮಾತನಾಡ್ತಿದ್ದಾರೆ. ವಿಧಾನಸೌಧದಲ್ಲಿ ನೀನು ಮಾಡಿರುವ ಕರ್ಮಕಾಂಡ ಎಲ್ಲರಿಗೂ ಗೊತ್ತು. ಮುನಿರತ್ನ ಹನಿಟ್ರ್ಯಾಪ್ ಪಿತಾಮಹ ಎಂದು ಆರೋಪಿಸಿದ್ದಾರೆ.
ಇಂದು ಮತ್ತೊಮ್ಮೆ ಗೃಹ ಸಚಿವರಿಗೆ ಮುನಿರತ್ನ ವಿರುದ್ಧ ದೂರು ನೀಡುತ್ತೇವೆ. ಹನಿಟ್ರ್ಯಾಪ್ ಮಾಡೋದಕ್ಕಾಗಿಯೇ ಮುನಿರತ್ನ ಸ್ಟುಡಿಯೋ ರಡಿ ಮಾಡಿದ್ದಾರೆ. ಇದಕ್ಕಾಗಿ ನಮ್ಮಲ್ಲಿ ದಾಖಲೆ ಇವೆ ಎಂದಿದ್ದಾರೆ. ಅಲ್ಲದೇ, ವೇಲುನಾಯ್ಕ್ ಅವರನ್ನು ಹನಿಟ್ರ್ಯಾಪ್ ಮಾಡಲು ಯತ್ನಿಸಿರುವ ಆಡಿಯೋ ಬಿಡುಗಡೆ ಮಾಡಿದ್ದಾರೆ. ಆಡಿಯೋದಲ್ಲಿ ಒಬ್ಬರು ನೀವು ಕೊಟ್ಟಿರೋ ಹಿಂಟ್ ವರ್ಕೌಟ್ ಆಯ್ತು…ಸೋಮವಾರ ವೇಲುನಾಯ್ಕ್ ಕಥೆ ಮುಗಿಯತ್ತೆ, ಡೈರೆಕ್ಟ್ ಆಗಿ ನಿಮ್ಮನ್ನು ಭೇಟಿ ಮಾಡ್ತೇನಿ ಅಂತಾರೆ..ಆಗ ಆ ಕಡೆಯಿಂದ ಹಳೆದಾ? ಹೊಸಾದ? ಅಂತಾರೆ..ಆಗ ಈ ಕಡೆಯಿಂದ ಭೇಟಿ ಮಾಡ್ತೇನಿ ಅಂತಾರೆ..ಅದೊಂದು ಕೆಲಸ ಮಾಡು, ನಿನ್ನ ಋಣ ಮರೆಯಲ್ಲ, ನಿನ್ನ ಕೆಲಸ ಎಲ್ಲ ಮಾಡಿ ಕೊಡ್ತೇನಿ ಅಂತಾರೆ. ಆನಂತರ ಸಂಭಾಷಣೆ ನಡೆಯುತ್ತದೆ…ನಾನು ಕತ್ತಲಾದ ಮೇಲೆ ಕಾಲ್ ಮಾಡ್ತೇನಿ ಅಂತಾ ಆ ಕಡೆಯಿಂದ ಉತ್ತರ ಬರತ್ತೆ..