ಚಾಂಪಿಯನ್ಸ್ ಟ್ರೋಫಿ ಆಯೋಜಿಸುತ್ತಿರುವ ಪಾಕಿಸ್ತಾನ್, ಭಾರತಕ್ಕೆ ತಕ್ಕ ಉತ್ತರ ನೀಡಲು ಹೋಗಿ ಈಗ ಫಜೀತಿ ಸಿಲುಕಿಕೊಳ್ಳುತ್ತಿದೆ.
ಈ ಟೂರ್ನಿಯ ಆಯೋಜಕತ್ವದ ಹಕ್ಕು ಪಡೆದಿರುವ ಪಾಕ್ ಕ್ರಿಕೆಟ್ ಮಂಡಳಿ, ಈಗಾಗಲೇ ತನ್ನ ತಯಾರಿಯನ್ನು ಕೊನೆಯ ಹಂತಕ್ಕೆ ತಂದು ನಿಲ್ಲಿಸಿದೆ. ಈ ಮಧ್ಯೆ ಭಾರತದೊಂದಿಗೆ ಜಿದ್ದಿಗೆ ಬಿದ್ದಿದೆ. ಹೀಗಾಗಿ ಪಾಕ್ ಗೆ ಭಾರೀ ನಷ್ಟುವಾಗುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದ ಬಿಸಿಸಿಐ ಈಗಾಗಲೇ ಐಸಿಸಿಗೆ ತಿಳಿಸಿದೆ. ಈ ಸಂದೇಶವನ್ನು ಐಸಿಸಿಯು ಪಾಕ್ ಕ್ರಿಕೆಟ್ ಮಂಡಳಿಗೆ ಕಳುಹಿಸಿದೆ. ಆದರೆ, ಯಾವುದೇ ಕಾರಣಕ್ಕೂ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸುವುದಿಲ್ಲ ಎಂದು ಪಾಕ್ ಪಟ್ಟು ಹಿಡಿದಿದೆ.
ಅಲ್ಲದೇ, ಆತಿಥ್ಯವನ್ನು ಕಸಿದಕೊಂಡರೆ, ಪಂದ್ಯಾವಳಿಯಿಂದಲೇ ಹಿಂದೆ ಸರಿಯುವುದಾಗಿ ಪಾಕಿಸ್ತಾನ ಬೆದರಿಕೆ ಹಾಕುತ್ತಿದೆ ಎನ್ನಲಾಗಿದೆ.
ಹೀಗಾಗಿ ಐಸಿಸಿ ಬೇರೆ ದೇಶದ ಆತಿಥ್ಯಕ್ಕೆ ಮುಂದಾಗುತ್ತಿದೆ ಎನ್ನಲಾಗುತ್ತಿದೆ. ಒಂದು ವೇಳೆ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನದಿಂದ ಸ್ಥಳಾಂತರಿಸಿದರೆ ಅಥವಾ ಪಂದ್ಯಾವಳಿಯನ್ನು ಮುಂದೂಡಬೇಕಾದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅತಿದೊಡ್ಡ ನಷ್ಟ ಎದುರಿಸಲಿದೆ. ಈ ಮೂಲಕ ಪಾಕ್ ಬರೋಬ್ಬರಿ 1800 ಕೋಟಿ ರೂ. ಕಳೆದುಕೊಳ್ಳಲಿದೆ. ಐಸಿಸಿ ನೀಡಿರುವ ಹಣದಲ್ಲಿ ಈಗಾಗಲೇ ಪಾಕ್ 1300 ಕೋಟಿ ರೂ. ಖರ್ಚು ಮಾಡಿದೆ. ಇನ್ನುಳಿದ ಹಣದಲ್ಲಿ ಬೇರೆ ದೇಶಗಳಿಂದ ಬರುವ ಆಟಗಾರರನ್ನು ನೋಡಿಕೊಂಡು, ಟೂರ್ನಿ ಆಯೋಜಿಸಬೇಕಿತ್ತು.
ಈ ಹಣದಲ್ಲಿ ಆರಾಮಾಗಿ ಅದು ಟೂರ್ನೀ ಆಯೋಜಿಸಬಹುದಿತ್ತು. ಆದರೆ, ಈಗ ಭಾರತದೊಂದಿಗೆ ಜಿದ್ದಿಗೆ ಬಿದ್ದು ನಷ್ಟ ಅನುಭವಿಸುವಂತಾಗಿದೆ. ಒಂದು ವೇಳೆ ಪಾಕ್ ಟೂರ್ನಿಯಿಂದ ಹಿಂದೆ ಉಳಿದರೆ, ಪ್ರಾಯೋಜಕತ್ವದಿಂದ ಹಿಂದೆ ಸರಿದರೆ, ಆ ಹಣವನ್ನು ಐಸಿಸಿಗೆ ನೀಡಬೇಕು. ಅದು ಕೂಡ ಪಾಕ್ ಗೆ ಹೊರೆಯಾಗಲಿದೆ. ಪಾಕ್ ಕ್ರಿಕೆಟ್ ಮಂಡಳಿ ಹೀಗೆ ತನ್ನ ಮೊಂಡುತನ ಮುಂದುವರೆಸಿದರೆ, ನಷ್ಟದೊಂದಿಗೆ ಕ್ರಿಕೆಟ್ ಮಂಡಳಿಯನ್ನೂ ಮುಚ್ಚಬಹುದು ಎನ್ನಲಾಗುತ್ತಿದೆ.