ಬೆಂಗಳೂರು : ಬೆಂಗಳೂರಿ ಹೊಂಗಸಂದ್ರದಲ್ಲಿ ವಾಹನಗಳ ಗಾಜುಗಳ ಹೊಡೆದು ಹಾಕಿರುವ ಪ್ರಕರಣ ನಡೆದಿದ್ದು, ರೌಡಿಶೀಟರ್, ಶಾಸಕರ ಆಪ್ತ ಸೋಮಶೇಖರ್ ವಿರುದ್ಧ ಸದ್ಯ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು 18 ವಾಹನಗಳ ಗಾಜುಗಳನ್ನು ಪುಡಿ ಮಾಡಿರುವುದಾಗಿ ತಿಳಿದು ಬಂದಿದೆ. ಆಟೋ, ಲಗೇಜ್ ಗಾಡಿ, ಸೇರಿ 18 ವಾಹನಗಳ ಜಖಂಗೊಂಡಿವೆ. ರಸ್ತೆಯ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿದ್ದಕ್ಕೆ ಆರೋಪಿಗಳು ಧಮ್ಕಿ ಹಾಕಿದ್ದರಂತೆ. ಸೋಮಶೇಖರ್ ಹಾಗೂ ಇತರರ ವರ್ತನೆಯಿಂದ ಸ್ಥಳೀಯರು ಭಯಗೊಂಡಿದ್ದರು. ಸದ್ಯ ಬೊಮ್ಮನಹಳ್ಳಿ ಪೋಲಿಸರು ಸೋಮಶೇಖರ್ ಸೇರಿ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.
ಈ ಹಿಂದೆ ಕೂಡ ಶಾಸಕರ ಮನೆ ಕಾಂಪೌಂಡ್ ನಲ್ಲಿ ಬೆಂಕಿ ಹಚ್ಚಿದ್ದ ಆರೋಪವಿದೆ. ಕಳೆದ ಕೆಲವು ದಿನಗಳ ಹಿಂದೆ ಗಲಾಟೆ ಮಾಡಿರುವುದನ್ನು ಸೇರಿ ಬೇಗೂರಿನಲ್ಲಿ ಗಲಾಟೆ ಪ್ರಕರಣ, RCB ಫೈನಲ್ ಮ್ಯಾಚ್ ಡೇ ಗಾರ್ವೆಬಾವಿಪಾಳ್ಯದ ಬಳಿ ಗಲಾಟೆ ಮಾಡಿದ್ದಲ್ಲದೇ, ಅದೇ ವಿಚಾರವಾಗಿ ಕೆಲವು ಯುವಕರಿಗೆ ಕಾಲ್ ಮಾಡಿ ಧಮ್ಕಿ ಹಾಕಿರುವ ಆರೋಪ ಈಗ ಕೇಳಿ ಬಂದಿದೆ.