ಬೆಂಗಳೂರು: ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಲ್ಲಿ ಭರ್ಜರಿ 1,770 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು website, iocl.com ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಬಿ.ಎ, ಬಿ.ಎಸ್ಸಿ, ಬಿ.ಕಾಮ್, ಡಿಪ್ಲೋಮಾ, ಪಿಯುಸಿ ಸೇರಿ ಆಯಾ ಕೋರ್ಸ್ ಮುಗಿಸಿದವರಿಗೆ ಆಯಾ ಹುದ್ದೆಗಳು ಕೈಬೀಸಿ ಕರೆಯುತ್ತಿವೆ. ಅರ್ಜಿ ಸಲ್ಲಿಸಲು ಜೂನ್ 2 ಕೊನೆಯ ದಿನವಾಗಿದೆ.
ಇವು ಅಪ್ರೆಂಟಿಸ್ ಹುದ್ದೆಗಳಾಗಿವೆ. ದೇಶಾದ್ಯಂತ ಇರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಘಟಕಗಳಲ್ಲಿ ಆಪರೇಟಿಂಗ್, ಫಿಟ್ಟರ್, ಬಾಯ್ಲರ್, ಡೇಟಾ ಎಂಟ್ರಿ, ಅಕೌಂಟಂಟ್, ಮೆಕ್ಯಾನಿಕಲ್, ಕೆಮಿಕಲ್, ಸೇರಿ ಹಲವು ವಿಭಾಗಗಳಲ್ಲಿ ಟ್ರೇಡ್ ಹಾಗೂ ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚಿಸಲಾಗಿದೆ.
ಟ್ರೇಡ್ ಅಪ್ರೆಂಟಿಸ್ – ಅಟೆಂಡಂಟ್ ಆಪರೇಟರ್ 421
ಟೆಕ್ನಿಶಿಯನ್ ಅಪ್ರೆಂಟಿಸ್ (ಕೆಮಿಕಲ್) 356
ಟ್ರೇಡ್ ಅಪ್ರೆಂಟಿಸ್ – ಅಕೌಂಟಂಟ್ 38
ಟ್ರೇಡ್ ಅಪ್ರೆಂಟಿಸ್ – ಡಾಟಾ ಎಂಟ್ರಿ ಆಪರೇಟರ್ (ಸ್ಕಿಲ್ ಸರ್ಟಿಫಿಕೇಟ್ ಹೋಲ್ಡರ್ಸ್) 53
ಟ್ರೇಡ್ ಅಪ್ರೆಂಟಿಸ್ (ಸೆಕ್ರೆಟೇರಿಯಲ್ ಅಸಿಸ್ಟಂಟ್) 69
ಟೆಕ್ನಿಶಿಯನ್ ಅಪ್ರೆಂಟಿಸ್ (ಎಲೆಕ್ಟ್ರಿಕಲ್) 240
ಟೆಕ್ನಿಶಿಯನ್ ಅಪ್ರೆಂಟಿಸ್ (ಇನ್ ಸ್ಟ್ರುಮೆಂಟೇಶನ್) 108
ಟ್ರೇಡ್ ಅಪ್ರೆಂಟಿಸ್ – ಡೇಟಾ ಎಂಟ್ರಿ ಆಪರೇಟರ್ 49
ಟೆಕ್ನಿಶಿಯನ್ ಅಪ್ರೆಂಟಿಸ್ (ಮೆಕ್ಯಾನಿಕಲ್) 169
ಟ್ರೇಡ್ ಅಪ್ರೆಂಟಿಸ್ – ಫಿಟ್ಟರ್ (ಮೆಕ್ಯಾನಿಕಲ್) 208
ಟ್ರೇಡ್ ಅಪ್ರೆಂಟಿಸ್ – ಬಾಯ್ಲರ್ (ಮೆಕ್ಯಾನಿಕಲ್) 76
18ರಿಂದ 24 ವರ್ಷದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ 1960 ಅಪ್ರೆಂಟಿಸ್ ಕಾಯ್ದೆ ಅಡಿಯಲ್ಲಿ ಮಾಸಿಕ 7ರಿಂದ 15 ಸಾವಿರ ರೂ.ವರೆಗೆ ಸ್ಟೈಪೆಂಡ್ ನೀಡಲಾಗುತ್ತದೆ. ಅಭ್ಯರ್ಥಿಗಳನ್ನು 12 ತಿಂಗಳ ಅವಧಿಗಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ನಿಗದಿತ ವಿದ್ಯಾರ್ಹತೆಯ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ, ಅವರಿಗೆ ಮೂಲ ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.