ಹಾಸನ: ಆನ್ ಲೈನ್ ವಂಚನೆ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ತಿಳಿದವರು ಹಾಗೂ ತಿಳಿಯದವರು ಈ ಕೂಪಕ್ಕೆ ಬೀಳುತ್ತಿದ್ದಾರೆ. ಜನರಿಗೆ ತಿಳುವಳಿಕೆ ಹೇಳಬೇಕಿದ್ದ ಡಿವೈಎಸ್ಪಿ ಆನ್ ಲೈನ್ ವಂಚಕರಿಂದ ಮೋಸ ಹೋಗಿದ್ದಾರೆ.
ಡಿವೈಎಸ್ಪಿ (DySP) ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ 2 ಬ್ಯಾಂಕ್ ಖಾತೆಯಿಂದ 15,98,761 ರೂ. ಎಗರಿಸಿರುವ ಘಟನೆ ಹಾಸನದಲ್ಲಿ (Hassan) ನಡೆದಿದೆ. ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪಿ.ಕೆ.ಮುರಳೀಧರ್ ಅವರ ಖಾತೆಯಿಂದ ಸೈಬರ್ ಖದೀಮರು (Cyber Crime) ಹಣ ಎಗರಿಸಿದ್ದಾರೆ. 2 ಬ್ಯಾಂಕ್ ಖಾತೆಗಳಿಂದ ಬರೋಬ್ಬರಿ 15,98,761 ಲಕ್ಷ ರೂ ಗುಳಂ ಮಾಡಿದ್ದಾರೆ. ಈ ಕುರಿತು ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಣವನ್ನು ವಂಚಕರು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಖದೀಮರನ್ನು ಪತ್ತೆ ಮಾಡಿ ತಮ್ಮ ಹಣ ವಾಪಸ್ ಕೊಡಿಸುವಂತೆ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.