ಬೆಂಗಳೂರು: ಡಿಜಿಟಲ್ ಅರೆಸ್ಟ್ ಮಾಡಿ ಟೆಕ್ಕಿಗೆ ಬರೋಬ್ಬರಿ 11 ಕೋಟಿ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು(POLICE) ಪ್ರಕರಣ ಭೇದಿಸಿದ್ದಾರೆ.
ಈ ಪ್ರಕರಣದಲ್ಲಿ ಮೂರು ದೇಶದವರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸೈಬರ್ ವಂಚಕರು ಎಲ್ಲೆಲ್ಲೋ ಕುಳಿತು ಭಾರತವನ್ನು ಲೂಟಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಶತೃರಾಷ್ಟ್ರಗಳಲ್ಲಿ ಕುಳಿತು ಸೈಬರ್ ವಂಚಕರು, ಭಾರತವನ್ನು ಲೂಟಿ ಮಾಡುತ್ತಿದ್ದಾರೆ. ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರ ತನಿಖೆ ಸಂದರ್ಭದಲ್ಲಿ ಈ ಸ್ಫೋಟಕ ಮಾಹಿತಿಗಳು ಬಯಲಾಗುತ್ತಿವೆ.
ದುಬೈ, ಚೀನಾ(china) ಹಾಗೂ ಪಾಕಿಸ್ತಾನ್(pakistan) ರಾಷ್ಟ್ರಗಳಲ್ಲಿ ಕುಳಿತು ರ್ಲ್ಡ್ ಬಿಗ್ಗೆಸ್ಟ್ ಸೈಬರ್ ಫ್ರಾಡ್ ನಡೆಯುತ್ತಿರುವ ಅನುಮಾನ ವ್ಯಕ್ತವಾಗುತ್ತಿದೆ. ಇದಕ್ಕೆ ಭಾರತದವರನ್ನೇ ಬಳಸಿಕೊಂಡು ಈ ಕೃತ್ಯ ಎಸಗುತ್ತಿರುವುದು ಕೂಡ ಬೆಳಕಿಗೆ ಬರುತ್ತಿವೆ.
ಟಿಕ್ಕಿಗೆ 11 ಕೋಟಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕರಣ್, ತರುಣಗ, ಧವಲ್ ಷಾ ಬಂಧಿತ ಆರೋಪಿಗಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತರುಣ್ ಕೆಲವು ಮಾಹಿತಿ ನೀಡಿದ್ದು, ಅದರ ವಿಚಾರದಲ್ಲಿ ಆರೋಪಿಗಳು ತನಿಖೆ ಆರಂಭಿಸಿದ್ದಾರೆ.
ದುಬೈನಲ್ಲೇ ಕುಳಿತುಕೊಂಡು ಟೆಕ್ಕಿಗೆ ಆರೋಪಿಗಳು ವಂಚಿಸಿದ್ದಾರೆ. ಆತನೊಂದಿಗೆ ಚೀನಾ ಮತ್ತು ಪಾಕ್ ನ ಕೆಲವರು ಸೇರಿಕೊಂಡಿದ್ದಾರೆ. ಖದೀಮರು ಭಾರತದಿಂದ ಸಿಮ್ ಸೇರಿದಂತೆ ಡೇಟಾ ತರಿಸಿಕೊಳ್ಳುತ್ತಾರೆ. ಹೀಗಾಗಿ ತರುಣ್ ದುಬೈಗೆ ಹೋಗಿ ಸಿಮ್ ಗಳು, ನಂಬರ್, ಡೀಟೆಲ್ಸ್ ನೀಡುತ್ತಿದ್ದ. ಈ ಕಿಂಗ್ ದುಬೈ ಕಿಂಗ್ ಪಿನ್ ಜೊತೆಗೆ ಚೀನಾ, ಪಾಕಿಸ್ತಾನದ ಖದೀಮರೂ ಸೇರಿಕೊಂಡಿರುವ ಮಾಹಿತಿ ಇದೆ. ಈ ಕುರಿತು ಈಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.