ಚಿಕ್ಕೋಡಿ: ಕಾರು ಹರಿದ ಪರಿಣಾಮ 10 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಅಪಘಾತ ನಡೆಸಿ ಪರಾರಿಯಾಗಿದ್ದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಸ್ತೆ ಪಕ್ಕದಿಂದ ನಡೆದುಕೊಂಡು ಹೋಗುತ್ತಿದ್ದ ಬಾಲಕನ ಮೇಲೆ ವಾಹನ ಹರಿದಿದೆ.
ಅಪಘಾತದಿಂದಾ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಅಗಸ್ತ್ಯ ವಿಜಯಕುಮಾರ ಕಣಮಡಿ (10) ಸಾವನ್ನಪ್ಪಿರುವ ದುರ್ದೈವಿ. ಬಾಲಕನು ಅಥಣಿ ತಾಲೂಕಿನ ರಡ್ಡೆರಟ್ಟಿ ಗ್ರಾಮದವನು ಎನ್ನಲಾಗಿದೆ. ಪರಾರಿಯಾಗಿದ್ದ ಕಾರು ಚಾಲಕ ಅಥಣಿ ಮೂಲದ ರಾಹುಲ ಸುರೇಂದ್ರ ಹುಂಡೇಕರ ಎಂದು ಗುರುತಿಸಲಾಗಿದೆ. ಸಿಸಿಟಿವಿ ಆಧಾರದ ಮೇಲೆ ಚಾಲಕನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.